ಎಣ್ಮೂರು ಶ್ರೀ ಆದಿಬೈದೇರುಗಳ ನೇಮೋತ್ಸವ: ಏಪ್ರಿಲ್ 1 ರಿಂದ ವೈಭವದ ಧಾರ್ಮಿಕ ಕಾರ್ಯಕ್ರಮಗಳು

ದಕ್ಷಿಣ ಕನ್ನಡ ಜಿಲ್ಲೆಯ ಎಣ್ಮೂರು ಕಟ್ಟಬೀಡಿನಲ್ಲಿ ಸುಗ್ಗಿ ತಿಂಗಳ ಪೂವೆಯಂದು ಶ್ರೀ ಆದಿಬೈದೇರುಗಳ ನೇಮೋತ್ಸವವು ಅತ್ಯಂತ ಶ್ರದ್ಧಾಭಕ್ತಿಯಿಂದ ಜರಗಲಿದೆ. ಮಾರ್ಚ್ 25 ರಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿದ್ದು, ಉಳ್ಳಾಕ್ಕುಳ ಬೀಡಿನಲ್ಲಿ ತಂಬಿಲ ಹಾಗೂ ಗರಡಿಯಲ್ಲಿ ಗೊನೆ ಕಡಿಯುವ ಮುಖಾಂತರ ಚಾಲನೆ ನೀಡಲಾಗಿದೆ. ಮಾರ್ಚ್ 30 ಮತ್ತು 31 ರಂದು ಶ್ರೀ ಉಳ್ಳಾಕುಳ ಮತ್ತು ಇಷ್ಟ ದೇವತೆಗಳ ನೇಮೋತ್ಸವ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ.

ಏಪ್ರಿಲ್ 1ರ ಬುಧವಾರದಂದು ಈ ಉತ್ಸವದ ಪ್ರಮುಖ ಘಟ್ಟಗಳು ನಡೆಯಲಿವೆ. ಅಂದು ಮಧ್ಯಾಹ್ನ 12:30ಕ್ಕೆ ಎಣ್ಮೂರು ಕಟ್ಟಬೀಡಿನಿಂದ ಸಂಪ್ರದಾಯಬದ್ಧವಾಗಿ ಭಂಡಾರ ಹೊರಡಲಿದ್ದು, ರಾತ್ರಿ 8 ಗಂಟೆಗೆ ಬೈದೇರುಗಳು ಗರಡಿ ಇಳಿಯಲಿದ್ದಾರೆ. ನಂತರ ಮಧ್ಯರಾತ್ರಿ ಮಾನಿಬಾಲೆ ಗರಡಿ ಇಳಿದು ರಂಗಸ್ಥಳ ಪ್ರವೇಶ ಮಾಡಲಿದ್ದಾರೆ. ಬೆಳಿಗ್ಗೆ 5:00 ಗಂಟೆಗೆಕೋಟಿ ಚೆನ್ನಯರ ದರ್ಶನ ರಂಗಸ್ಥಳದಲ್ಲಿ ಬೈದೇರುಗಳ ಸೇಟು ಕಾರ್ಯಕ್ರಮ ನಡೆಯಲಿದೆ.ಬೆಳಿಗ್ಗೆ 7:00 ಗಂಟೆಗೆ ಬೈದೇರುಗಳಲ್ಲಿ ಅರಿಕೆ, ಗಂಧ ಪ್ರಸಾದ ಹಾಗೂ ತುಲಾಭಾರ ಕಾರ್ಯಕ್ರಮಗಳು ನಡೆಯಲಿದೆ .







Comments