ಕೊಡಿಯಾಲಬೈಲು ಜೈಲಿನಲ್ಲಿ ಕೈದಿಗಳ ಬಳಿ ಮೊಬೈಲ್ ಪತ್ತೆ
- 6 days ago
- 1 min read

ಮಂಗಳೂರಿನ ಕೊಡಿಯಾಲಬೈಲು ಜಿಲ್ಲಾ ಕಾರಾಗೃಹದಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳ ಬಳಿ ಅಕ್ರಮವಾಗಿ ಮೊಬೈಲ್ ಫೋನ್‌ಗಳು ಪತ್ತೆಯಾಗಿದ್ದು, ಜೈಲಿನ ಭದ್ರತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.
ಜುಲೈ 7ರಂದು ರಾತ್ರಿ ಜೈಲಿನ ಅಧೀಕ್ಷಕ ಶರಣ ಬಸಪ್ಪ ಸಿಬಂದಿಯೊಂದಿಗೆ ‘ಎ‘ ಬ್ಲಾಕ್‌ನಲ್ಲಿ ದಿಢೀರ್ ತಪಾಸಣೆ ನಡೆಸಿದಾಗ, ಕೈದಿಗಳಾದ ಮೊಹಮ್ಮದ್ ಅಜ್ಮಲ್ ಮತ್ತು ಮೊಹಮ್ಮದ್ ಇಕ್ಬಾಲ್ ಬಳಿ ಮೊಬೈಲ್ ಪತ್ತೆಯಾಗಿವೆ.
ಜೈಲಿನ ನಿಯಮ ಉಲ್ಲಂಘಿಸಿ ಮೊಬೈಲ್ ಬಳಸುತ್ತಿದ್ದ ಈ ಇಬ್ಬರು ಆರೋಪಿಗಳ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಸದ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.







Comments