;
top of page

ಮಹಾಕುಂಭಮೇಳದಲ್ಲಿ ಖ್ಯಾತಿಯಾಗಿದ್ದ ಐಐಟಿ ಬಾಬಾ ದಾಂಪತ್ಯ ಜೀವನಕ್ಕೆ ಲಗ್ಗೆ

  • 7 days ago
  • 1 min read

ಮಹಾಕುಂಭಮೇಳದಲ್ಲಿ 'ಐಐಟಿ ಬಾಬಾ' ಎಂದೇ ಖ್ಯಾತರಾಗಿದ್ದ ಅಭಯ್ ಸಿಂಗ್ ಅವರು ಸಂಸಾರ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 15ರ ಮಹಾಶಿವರಾತ್ರಿಯಂದು ಹಿಮಾಚಲ ಪ್ರದೇಶದ ದೇವಸ್ಥಾನವೊಂದರಲ್ಲಿ ಬೆಂಗಳೂರು ಮೂಲದ ಇಂಜಿನಿಯರ್ ಪ್ರೀತಿಕಾ ಎಂಬವರನ್ನು ವರಿಸಿದ್ದಾರೆ. ಸೋಮವಾರ ಹರಿಯಾಣದ ತಮ್ಮ ಸ್ವಗ್ರಾಮಕ್ಕೆ ಪತ್ನಿಯೊಂದಿಗೆ ಆಗಮಿಸಿದ ಇವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ. ವಿಶೇಷವೆಂದರೆ, ವಿವಾಹದ ನಂತರವೂ ಅಭಯ್ ಸಿಂಗ್ ತಮ್ಮ ಎಂದಿನ ಕೇಸರಿ ವಸ್ತ್ರಧಾರಿಗಳಾಗಿಯೇ ಕಾಣಿಸಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ.

ಹರಿಯಾಣದ ಅಭಯ್ ಸಿಂಗ್ ಐಐಟಿ ಬಾಂಬೆಯಿಂದ ಏರೋಸ್ಪೇಸ್ ಇಂಜಿನಿಯರಿಂಗ್ ಮುಗಿಸಿ, ಕೆನಡಾದಲ್ಲಿ ವಾರ್ಷಿಕ 36 ಲಕ್ಷ ರೂಪಾಯಿ ಸಂಬಳದ ಕೆಲಸ ಮಾಡುತ್ತಿದ್ದರು. ಆದರೆ ಕಾರ್ಪೊರೇಟ್ ಜೀವನದ ಒತ್ತಡದಿಂದ ಖಿನ್ನತೆಗೊಳಗಾಗಿ, ಅಧ್ಯಾತ್ಮದ ಹಾದಿ ಹಿಡಿದು ಕುಂಭಮೇಳದಲ್ಲಿ ಸಾಧುವಾಗಿ ಕಾಣಿಸಿಕೊಂಡಿದ್ದರು. ಒಂದು ವರ್ಷದ ಹಿಂದೆ ಪರಿಚಯವಾದ ಪ್ರೀತಿಕಾ ಅವರೊಂದಿಗೆ ಪ್ರೀತಿ ಮೊಳೆತು ಈಗ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಅಧ್ಯಾತ್ಮ ಮತ್ತು ಸಂಸಾರ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯುವ ಇವರ ನಿರ್ಧಾರ ಈಗ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.


Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page