;
top of page

ಕುದ್ಮಾರು ಬೇರಿಕೆಯಲ್ಲಿ ನಾಳೆ ಶ್ರೀ ಕೊರಗಜ್ಜ ದೈವಸ್ಥಾನದ ಹರಕೆ ನೇಮೋತ್ಸವ

1 day ago
1 min read

ಕುದ್ಮಾರು: ಇಲ್ಲಿನ ಬೇರಿಕೆಯ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ಮತ್ತು ಕೊರಗಜ್ಜ ದೈವಸ್ಥಾನದಲ್ಲಿ 2026ರ ಸೆಪ್ಟೆಂಬರ್ 19ರ ಶನಿವಾರದಂದು ಹರಕೆ ನೇಮೋತ್ಸವವು ಶ್ರದ್ಧಾ ಭಕ್ತಿಗಳಿಂದ ನೆರವೇರಲಿದೆ.

ಸಂಜೆ 4:00 ಗಂಟೆಗೆ ದೈವಕ್ಕೆ ಎಣ್ಣೆ ಕೊಡುವ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6:00 ಗಂಟೆಯಿಂದ ಹರಕೆ ನೇಮಗಳು ಆರಂಭಗೊಳ್ಳಲಿವೆ. ರಾತ್ರಿ 8:00 ಗಂಟೆಗೆ ಹರಕೆ ಹಾಗೂ ಕರಿಗಂಧ ಪ್ರಸಾದ ವಿತರಣೆ ಮತ್ತು 8:30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ.

ವಿಶೇಷವಾಗಿ 9 ಹರಕೆ ನೇಮಗಳು ಏಕಕಾಲದಲ್ಲಿ ನಡೆಯಲಿದ್ದು, ಉಮೇಶ್ ಕೆ.ಎನ್., ಧರ್ಣಪ್ಪಗೌಡ, ರಮೇಶ್ ಕೆ.ಎನ್., ಶೇಖರ ಗೌಡ, ಅಶ್ವಿತಾ-ಕಾರ್ತಿಕ್, ಚೆನ್ನಪ್ಪ ಗೌಡ, ಕುಶಾಲಪ್ಪ ಗೌಡ, ಶಿವರಾಮ ಗೌಡ ಹಾಗೂ ಜಯಂತ್ ಸುವರ್ಣ ಕುಟುಂಬಸ್ಥರು ಹರಕೆ ನೇಮ ಸೇವೆ ನೀಡಲಿದ್ದಾರೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತಾದಿಗಳಿಗೆ ಆಡಳಿತ ಮಂಡಳಿಯು ಆದರದ ಸ್ವಾಗತ ಕೋರಿದೆ.


Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page