ಇರಾನ್ ಸಂತ್ರಸ್ತರ ನೆರವಿಗೆ ಧಾವಿಸಿದ ಕಾಶ್ಮೀರ: ಬೆಳೆಬಾಳುವ ವಸ್ತುಗಳನ್ನ ದಾನ ಮಾಡಿದ ಕಾಶ್ಮೀರದ ಜನತೆ

ಶ್ರೀನಗರ: ಯುದ್ಧಪೀಡಿತ ಇರಾನ್ ಜನತೆಯ ಸಹಾಯಕ್ಕಾಗಿ ಜಮ್ಮು-ಕಾಶ್ಮೀರದ ಮುಸ್ಲಿಂ ಕುಟುಂಬಗಳು ಮಾನವೀಯತೆ ಮೆರೆದಿವೆ. ಬುಡ್ಯಾಮ್ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಬೃಹತ್ ದೇಣಿಗೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಜನರು ನಗದು ಮಾತ್ರವಲ್ಲದೆ ಚಿನ್ನಾಭರಣ, ಜಾನುವಾರು ಹಾಗೂ ತಾಮ್ರದ ಪಾತ್ರೆಗಳನ್ನು ದಾನವಾಗಿ ನೀಡುತ್ತಿದ್ದಾರೆ.

ಪುಟ್ಟ ಮಕ್ಕಳು ತಮ್ಮ ಪಿಗ್ಗಿ ಬ್ಯಾಂಕ್ ಹಣ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಅಭೂತಪೂರ್ವ ಬೆಂಬಲಕ್ಕೆ ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಯು ಕೃತಜ್ಞತೆ ಸಲ್ಲಿಸಿದ್ದು, ಕಾಶ್ಮೀರಿಗರ ಈ ದಯೆಯ ಕಾರ್ಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಶ್ಲಾಘಿಸಿದೆ.







Comments