ಬೆಳ್ತಂಗಡಿಯಲ್ಲಿ ನಕಲಿ ನೋಟು ಜಾಲ ಬಯಲು: ಏಳು ಮಂದಿ ಬಂಧನ

ಬೆಳ್ತಂಗಡಿಯಲ್ಲಿ ನಕಲಿ ನೋಟು ಜಾಲ ಬಯಲು: ಏಳು ಮಂದಿ ಬಂಧನ
ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಅಡಿಂಜೆ ಪ್ರದೇಶದಲ್ಲಿ ನಕಲಿ ನೋಟು ತಯಾರಿಸುತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ನಡೆಸಿದ ದಾಳಿಯಲ್ಲಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರು ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಮೂಲದವರಾಗಿದ್ದು, ನಿರ್ಜನ ಪ್ರದೇಶದಲ್ಲಿರುವ ಬಾಡಿಗೆ ಮನೆಯಲ್ಲಿ ನಕಲಿ ನೋಟು ತಯಾರಿಕಾ ಚಟುವಟಿಕೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ದಾಳಿಯ ವೇಳೆ ನಕಲಿ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಅತ್ಯಾಧುನಿಕ ಸ್ಕ್ಯಾನರ್ ಹಾಗೂ ಪ್ರಿಂಟಿಂಗ್ ಯಂತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಇದರೊಂದಿಗೆ ಅಸಲಿ ನೋಟುಗಳಂತೆ ಕಾಣುವ ಗುಣಮಟ್ಟದ ಕಾಗದದ ಬಂಡಲ್‌ಗಳು ಹಾಗೂ ಈಗಾಗಲೇ ಮುದ್ರಿಸಲಾದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಜಾಲ ಪತ್ತೆಯಾಗದೆ ಇದ್ದಿದ್ದರೆ ಕೋಟ್ಯಾಂತರ ರೂಪಾಯಿ ಮೌಲ್ಯದ ನಕಲಿ ನೋಟುಗಳು ಮಾರುಕಟ್ಟೆಗೆ ಹರಿದು ಹೋಗುವ ಸಾಧ್ಯತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಪ್ರಕರಣದ ಕುರಿತಂತೆ ಹೆಚ್ಚಿನ ತನಿಖೆ ಮುಂದುವರಿದಿದ್ದು, ಈ ಜಾಲದ ಹಿಂದೆ ಇನ್ನೂ ಯಾರು ಇದ್ದಾರೆ ಎಂಬುದರ ಬಗ್ಗೆ ಪೊಲೀಸರು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.







Comments