ಸುಳ್ಯ: ಇಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು
- sathyapathanewsplu
- Oct 28
- 1 min read

ಸುಳ್ಯ: (ಅಕ್ಟೋಬರ್ 28) ಸುಳ್ಯ ತಾಲೂಕಿನ ದುಗಲಡ್ಕದ ಕೇಶವ ಪೂಜಾರಿ ಅವರ ಪುತ್ರ, ಇಂಜಿನಿಯರಿಂಗ್ ವಿದ್ಯಾರ್ಥಿ ವೀಕ್ಷಿತ್ (19) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಜಟ್ಟಿಪಳ್ಳದ ಕಾನತ್ತಿಲ ಬಳಿಯಿರುವ ಬಾಡಿಗೆ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವೀಕ್ಷಿತ್ ಅವರು ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು ಕಾಲೇಜಿನಲ್ಲಿ ಕ್ಲಾಸ್ ಟೆಸ್ಟ್ ಅಟೆಂಡ್ ಮಾಡಿದ್ದ ವೀಕ್ಷಿತ್, ಸಂಜೆ ಎಂದಿನಂತೆ ಕೆಲಸದ ಸ್ಥಳದಿಂದ ತಾಯಿಯನ್ನು ಕರೆದುಕೊಂಡು ಬರಲು ಹೋಗಿಲ್ಲ. ಮಗನ ಫೋನ್ ಸ್ವೀಕರಿಸದ ಕಾರಣ, ತಾಯಿ ಪದ್ಮನಿಯವರು ಪಕ್ಕದ ಮನೆಯವರಿಗೆ ಫೋನ್ ಮಾಡಿ ನೋಡಲು ತಿಳಿಸಿದ್ದಾರೆ. ಈ ವೇಳೆ ವಿಷಯ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
For Advertisement Contact:
Would you like to promote your business, service, or product on our sathyapatha news plus website?
Please contact for advertisements: 9880834166 / WhatsApp






Comments