top of page
News Articles
Sathyapatha News Plus


ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಪುತ್ತೂರು ಉಪವಿಭಾಗದ 4 ತಾಲೂಕುಗಳಲ್ಲಿ ಆ.8ರಂದು ಶಾಲಾ-ಕಾಲೇಜುಗಳಿಗೆ ರಜೆ
ಮಂಗಳೂರು, ಆ.7: ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ನೀಡಿರುವ ಹವಾಮಾನ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗದಾದ್ಯಂತ ಮಳೆ ಮುಂದುವರಿದಿದೆ. ಇದೇ ಹವಾಮಾನ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಲವು ತುರ್ತು ಕ್ರಮಗಳನ್ನು ಕೈಗೊಂಡಿದೆ. ಪುತ್ತೂರು ಉಪವಿಭಾಗದ ತಹಶೀಲ್ದಾರರ ಮನವಿಯ ಮೇರೆಗೆ ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಕಡಬ ತಾಲೂಕುಗಳ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ
Aug 71 min read


ಕುಂದಾಪುರ ಶೂಟೌಟ್ ಬಳಿಕ ಉಡುಪಿಯಲ್ಲಿ ಮತ್ತೊಂದು ರಕ್ತಪಾತಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಗುಂಡಿನ ದಾಳಿಗೆ ಬಲಿ
ಉಡುಪಿ: ಕುಂದಾಪುರದಲ್ಲಿ ನಡೆದ ಶೂಟೌಟ್ ಘಟನೆ ಮಾಸುವ ಮುನ್ನವೇ, ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಗುಂಡಿನ ದಾಳಿ ಸಂಭವಿಸಿದ್ದು, ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ (ಪ್ರಿನ್ಸ್) ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಈ ಘಟನೆಯಿಂದ ಕರಾವಳಿ ಭಾಗವೇ ಬೆಚ್ಚಿಬಿದ್ದಿದೆ. ಸ್ಥಳೀಯವಾಗಿ ಪ್ರಭಾವಿ ನಾಯಕನಾಗಿದ್ದ ಡೇವಿಡ್ ಡಿಸೋಜಾ ಅವರು ಮುದರಂಗಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದು, ಸಾರ್ವಜನಿಕ ಸೇವೆಯಲ್ಲಿ ಸಕ್ರಿಯರಾಗಿದ್ದರು. ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಶೂಟೌಟ್ಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬ
Aug 71 min read


ವರ್ಕ್ ಫ್ರಂ ಹೋಂ' ಹೆಸರಲ್ಲಿ ಕೋಟ್ಯಂತರ ವಂಚನೆ: ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಜನರಿಗೆ ಬಲೆ ಬೀಸಿದ್ದ ದಂಪತಿ ಬಂಧನ
ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ‘ವರ್ಕ್ ಫ್ರಂ ಹೋಂ’ ಹೆಸರಿನಲ್ಲಿ ಪ್ಯಾಕಿಂಗ್ ಕೆಲಸ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ್ದ ಆರೋಪದ ಮೇಲೆ ಕಿರಣ್ ಮತ್ತು ಆತನ ಪತ್ನಿ ಆರತಿ ಅವರನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ‘ಕಾಳಿಕಾ ದೇವಿ ಎಂಟರ್ಪ್ರೈಸಸ್’ ಹೆಸರಿನಲ್ಲಿ ನಕಲಿ ಸಂಸ್ಥೆ ಸ್ಥಾಪಿಸಿ, ಮೇಣದ ಬತ್ತಿ, ಅಗರಬತ್ತಿ ಹಾಗೂ ಡ್ರೈ ಫ್ರೂಟ್ಸ್ ಪ್ಯಾಕಿಂಗ್ ಕೆಲಸವನ್ನು ಮನೆಬಾಗಿಲಿಗೆ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಮಾಡುತ್ತಿದ್ದರು. ಕಚ್ಚಾ ವಸ್ತುಗಳ ಪ್ಯಾಕಿಂಗ್ ಕೆಲಸಕ್ಕಾಗಿ ₹1 ಲಕ್ಷ ಡೆಪಾಸಿಟ್ ಮಾಡಿದರೆ ಪ್ರತಿ ತಿಂಗಳು
Aug 71 min read


ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಉಡುಪಿಯ ಯುವತಿ ಆತ್ಮಹತ್ಯೆ
ಉಡುಪಿ, ಆ.7: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿಯೊಬ್ಬರು ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಮಾಡಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಮೃತರನ್ನು ಕಲ್ಮಾಡಿ ನಿವಾಸಿ ಕೃತಿ ಬಂಗೇರಾ (27) ಎಂದು ಗುರುತಿಸಲಾಗಿದೆ. ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದು, ನಗರದ ಕಡಿಯಾಳಿ ಸಮೀಪದ ಖಾಸಗಿ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲವು ತಿಂಗಳಿಂದ ಅವರು ಕೆಲಸಕ್ಕೆ ತೆರಳದೆ ಮನೆಯಲ್ಲೇ ಇದ್ದರು ಎಂದು ತಿಳಿದುಬಂದಿದೆ. ಘಟನೆಯ ದಿನ ತಾಯಿ ಕೆಲಸದ ನಿಮಿತ್ತ ಹೊರಗೆ ತೆರಳಿ
Aug 71 min read


ವಿಟ್ಲ : ಅಡ್ಯನಡ್ಕದಲ್ಲಿ ಆಕಸ್ಮಿಕ ದುರಂತ: ಕೆರೆಗೆ ಬಿದ್ದು 32 ವರ್ಷದ ವ್ಯಕ್ತಿ ಸಾವು
ವಿಟ್ಲ, ಆ.7: ವಿಟ್ಲ ಸಮೀಪದ ಅಡ್ಯನಡ್ಕ ಗ್ರಾಮದ ಮನಿಮುಂಡ ಪ್ರದೇಶದಲ್ಲಿ ಕಾಲು ಜಾರಿ ಕೆರೆಗೆ ಬಿದ್ದ ಪರಿಣಾಮ ಕೂಲಿ ಕಾರ್ಮಿಕನೋರ್ವ ಮೃತಪಟ್ಟ ದುರ್ಘಟನೆ ನಡೆದಿದೆ. ಮೃತರನ್ನು ದಿನೇಶ್ ನಾಯ್ಕ (32) ಎಂದು ಗುರುತಿಸಲಾಗಿದೆ. ಅವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಪತ್ನಿ ಹಾಗೂ ತಂದೆ-ತಾಯಿಯನ್ನು ಅಗಲಿದ್ದಾರೆ. ಲಭ್ಯವಾದ ಮಾಹಿತಿಯಂತೆ, ದಿನೇಶ್ ಅವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮು
Aug 71 min read


ರಾಷ್ಟ್ರೀಯ ಹಸ್ತಮಗ್ಗ ದಿನ: ಕೈಮಗ್ಗ ಉತ್ಪನ್ನಗಳೊಂದಿಗೆ GRWM ವಿಡಿಯೋ ಹಂಚಿಕೊಳ್ಳಿ – ಪ್ರಧಾನಿ ಮೋದಿ ಕರೆ
ನವದೆಹಲಿ, ಆ. 6: ಭಾರತದ ಸಮೃದ್ಧ ಹಸ್ತಮಗ್ಗ ಪರಂಪರೆಯನ್ನು ವಿಶ್ವದಾದ್ಯಂತ ಜನಪ್ರಿಯಗೊಳಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ವಿಶೇಷ ಕರೆ ನೀಡಿದ್ದಾರೆ. ಆಗಸ್ಟ್ 7ರಂದು ಆಚರಿಸಲಾಗುವ ರಾಷ್ಟ್ರೀಯ ಹಸ್ತಮಗ್ಗ ದಿನದ ಅಂಗವಾಗಿ ತಮ್ಮ ನೆಚ್ಚಿನ ಹಸ್ತಮಗ್ಗ ಉಡುಪುಗಳು ಮತ್ತು ಉತ್ಪನ್ನಗಳೊಂದಿಗೆ GRWM (Get Ready With Me) ಸೇರಿದಂತೆ ಸೃಜನಾತ್ಮಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಜೊತೆಗೆ #NationalHandloomDay ಹ್ಯಾಶ್ಟ್ಯಾಗ್ ಬಳಸುವಂತೆ ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್' ಮತ್ತು ಇನ್ಸ್ಟಾಗ್ರಾಂನಲ್ಲ
Aug 61 min read


ಸಕಲೇಶಪುರ–ಸುಬ್ರಹ್ಮಣ್ಯ ಘಾಟ್ನಲ್ಲಿ ವಂದೇ ಭಾರತ್ ಟ್ರಯಲ್ ರನ್ಗೆ ಸಿದ್ಧತೆ: ಆ.11ರಿಂದ ಸುರಕ್ಷತಾ ಪರೀಕ್ಷೆ ಆರಂಭ
ಬೆಂಗಳೂರು, ಆ.6: ಬಹುನಿರೀಕ್ಷಿತ ಬೆಂಗಳೂರು–ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಆರಂಭದತ್ತ ಮಹತ್ವದ ಹೆಜ್ಜೆ ಇಟ್ಟಿದ್ದು, ಆಗಸ್ಟ್ 11ರಿಂದ 20ರವರೆಗೆ ಪರೀಕ್ಷಾರ್ಥ ಸಂಚಾರ (ಟ್ರಯಲ್ ರನ್) ನಡೆಸಲು ರೈಲ್ವೆ ಇಲಾಖೆ ಸಿದ್ಧತೆ ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ ರೈಲಿನ ಕಾರ್ಯಕ್ಷಮತೆ ಹಾಗೂ ಸುರಕ್ಷತಾ ಮಾನದಂಡಗಳನ್ನು ವಿವಿಧ ಹಂತಗಳಲ್ಲಿ ಪರಿಶೀಲಿಸಲಾಗುತ್ತದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಟ್ರಯಲ್ ರನ್ಗೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಭಾರತೀಯ ರೈಲ್ವೆಯ ಸಂಶೋಧನೆ, ವಿನ್ಯಾಸ ಮತ್ತು ಮಾನಕ ಸಂಸ್ಥೆ (RDSO) ಅಧಿಕಾರಿಗಳ ತಂಡವು ಪರೀಕ್ಷಾರ್ಥ ಸಂಚಾರದ ಮೇಲ್ವಿಚ
Aug 61 min read


ಸಂಪಾಜೆಯಲ್ಲಿ ಕಾಡುಕೋಣ ಬೇಟೆ; ಮಾಂಸ ಮಾರಾಟಕ್ಕೆ ಯತ್ನ – ಇಬ್ಬರ ಬಂಧನ, ಓರ್ವ ಪರಾರಿ
ಸಂಪಾಜೆ, ಆ.6: ಕೊಡಗು ಜಿಲ್ಲೆಯ ಚೆಂಬು ಅರಣ್ಯ ವಲಯದಲ್ಲಿ ಕಾಡು ಪ್ರಾಣಿಯನ್ನು ಬೇಟೆಯಾಡಿ ಅದರ ಮಾಂಸವನ್ನು ಮಾರಾಟಕ್ಕೆ ಸಾಗಿಸುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಬಂಧಿತ ಆರೋಪಿಗಳನ್ನು ಗೌತಮ್ (ಚೆಂಬು) ಹಾಗೂ ಶರತ್ (ಪೆರಾಜೆ) ಎಂದು ಗುರುತಿಸಲಾಗಿದೆ. ಯತಿನ್ (ಕಾಡುಪಂಜ) ಎಂಬ ಆರೋಪಿ ಪರಾರಿಯಾಗಿದ್ದಾನೆ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಕೊಡಗು ವ್ಯಾಪ್ತಿಯ ಚೆಂಬು ಅರಣ್ಯದ ಕಾಡುಪಂಜ ಪ್ರದೇಶದಲ್ಲಿ ಕಾಡುಕೋಣವನ್ನು ಅಕ್ರಮವಾಗಿ ಬೇಟೆಯಾಡಿ ಹತ್ಯೆ ಮಾ
Aug 61 min read


ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಉಮರ್ ಫಾರೂಕ್ ಎನ್ಐಎ ಬಲೆಗೆ
ಮಂಗಳೂರು, ಆ.6: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಕೇರಳದ ಕೊಚ್ಚಿಯಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ಸುಳ್ಯ ತಾಲೂಕಿನ ಕಲ್ಲುಮುಟ್ಟು ನಿವಾಸಿ ಉಮರ್ ಫಾರೂಕ್ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪಟ್ಟಿಯಲ್ಲಿ ಈತನ ಹೆಸರು ಇದ್ದು, ಮಾಹಿತಿ ನೀಡಿದವರಿಗೆ ಎನ್ಐಎ ₹2 ಲಕ್ಷ ಬಹುಮಾನ ಘೋಷಿಸಿತ್ತು. 2022ರ ಜುಲೈ 26ರಂದು ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯಲ್ಲಿ, ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಹಿಂದ
Aug 61 min read


11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಆರೋಪಿ ಮಂಗಳೂರು ಸಿಸಿಬಿ ವಶಕ್ಕೆ
೨೦೧೫ರಲ್ಲಿ ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ೧೧ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂකಿನ ಮಲ್ಲೇನಹಳ್ಳಿ ನಿವಾಸಿ ಚುಂಕಿ ಆಕಾಶಭವನ ಅಲಿಯಾಸ್ ಸಂತೋಷ್ ಎಸ್ (೩೪) ಬಂಧಿತ ಆರೋಪಿಯಾಗಿದ್ದಾನೆ. ೨೦೧೫ರಲ್ಲಿ ಆಕಾಶಭವನದಲ್ಲಿ ನಡೆದ ಮದುವೆಯ ಮದರಂಗಿ ಶಾಸ್ತ್ರದ ವೇಳೆ ಅಶೋಕ ಕುಮಾರ ಕೊಟ್ಟಾರಿ ಎಂಬವರ ಮೇಲೆ ಆರೋಪಿ ಸಂತೋಷ್ ತನ್ನ ಸಹಚರರೊಂದಿಗೆ ಸೇರಿ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಈ ಭೀಕರ
Jul 311 min read


ಪರೀಕ್ಷಾ ಅಕ್ರಮಗಳಿಗೆ ಕಡಿವಾಣ: ಸಂಸತ್ತಿನಲ್ಲಿ ಮಹತ್ವದ ಮಸೂದೆ ಅಂಗೀಕಾರ – ಪ್ರಧಾನಿ ಮೋದಿ ಸಂತಸ
ನವದೆಹಲಿ: ದೇಶದ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ, ಸುರಕ್ಷಿತ ಹಾಗೂ ವಿಶ್ವಾಸಾರ್ಹವಾಗಿಸುವ ಉದ್ದೇಶದಿಂದ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆ) ತಿದ್ದುಪಡಿ ಮಸೂದೆ–2026 ಅನ್ನು ಸಂಸತ್ತು ಅಂಗೀಕರಿಸಿದೆ. ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮಸೂದೆಗೆ ಅನುಮೋದನೆ ದೊರೆತಿದ್ದು, ರಾಷ್ಟ್ರಪತಿಯ ಅಂಕಿತದ ಬಳಿಕ ಇದು ಕಾನೂನಾಗಲಿದೆ. ಮಸೂದೆ ಅಂಗೀಕಾರವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಸಂದೇಶ ಬಿಡುಗಡೆ ಮಾಡಿ, "ಸಂಸತ್ತು ನಮ್ಮ ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ಮಸೂದೆಯನ್ನು ಅಂಗೀಕರಿಸಿದೆ" ಎಂದು ಸಂತಸ ವ್ಯಕ್ತಪಡಿಸಿದರು. ವಿ
Jul 311 min read


ಪುತ್ರಿಯರ ಅಕ್ರಮ ನೇಮಕ ಆರೋಪ: ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತು
ಬೆಂಗಳೂರು, ಜುಲೈ 13: ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷರಾದ ಶಿವಶಂಕರಪ್ಪ ಎಸ್. ಸಾಹುಕಾರ ಅವರನ್ನು ತಮ್ಮ ಪುತ್ರಿಯರ ಅಕ್ರಮ ನೇಮಕಾತಿಗೆ ನೆರವಾದ ಆರೋಪದ ಹಿನ್ನೆಲೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್ ಆದೇಶ ಹೊರಡಿಸಿದ್ದಾರೆ. ಶಿವಶಂಕರಪ್ಪ ವಿರುದ್ಧದ ಗಂಭೀರ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಲು ಶಿಫಾರಸು ಮಾಡಲಾಗಿದ್ದು, ಈ ವಿಚಾರವನ್ನು ಸುಪ್ರೀಂ ಕೋರ್ಟ್ಗೆ ಉಲ್ಲೇಖಿಸಲು ರಾಷ್ಟ್ರಪತಿಗಳಿಗೆ ರಾಜ್ಯಪಾಲರು ಶಿಫಾರಸು ಮಾಡಿದ್ದಾರೆ. ಮುಂದಿನ ಆದೇಶ ಬರುವವರೆಗೆ ಕೆಪಿಎಸ್ಸಿಯ ಹಿರಿಯ ಸದಸ್ಯರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹ
Jul 131 min read


ದೇಶದಾದ್ಯಂತ ತುರ್ತು ಎಚ್ಚರಿಕೆ ಸೇವೆ ಪರೀಕ್ಷೆ: ಮೊಬೈಲ್ಗಳಿಗೆ ಸರ್ಕಾರದ ಟೆಸ್ಟ್ ಸಂದೇಶ
ಭಾರತ ಸರ್ಕಾರವು ದೇಶದಾದ್ಯಂತ ನಾಗರಿಕರ ಸುರಕ್ಷತೆಗೆ ಮಹತ್ವದ ಹೆಜ್ಜೆಯಾಗಿ ಹೊಸ “ಸೆಲ್ ಬ್ರಾಡ್ಕಾಸ್ಟ್” ತಂತ್ರಜ್ಞಾನವನ್ನು ಬಳಸಿ ತುರ್ತು ಎಚ್ಚರಿಕೆ ಸೇವೆಯನ್ನು ಪರೀಕ್ಷೆ ನಡೆಸಿದೆ. ಈ ಸೇವೆಯ ಮೂಲಕ ಭೂಕಂಪ, ಪ್ರವಾಹ, ಚಂಡಮಾರುತ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳ ಸಮಯದಲ್ಲಿ ತಕ್ಷಣವೇ ಜನರಿಗೆ ಮೊಬೈಲ್ಫೋನ್ ಮೂಲಕ ಎಚ್ಚರಿಕೆ ಸಂದೇಶಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ನಾಗರಿಕರ ಮೊಬೈಲ್ಗಳಿಗೆ “This is a test message” ಎಂಬ ಸೂಚನೆಯೊಂದಿಗೆ ಸಂದೇಶಗಳು ಬಂದಿವೆ. ಈ ಸಂದೇಶವು ಕೇವಲ ಪರೀಕ್ಷಾರ್ಥವಾಗಿದ್ದು, ಸಾರ್ವಜನಿಕರು ಯಾವುದೇ ಆತಂಕಪಡಬೇಕಾಗಿಲ್ಲ
May 21 min read


ದೇವನಹಳ್ಳಿಯಲ್ಲಿ ಅಮಾಯಕ ಟೀ ಮಾರಾಟಗಾರನ ಮೇಲೆ ಪೊಲೀಸ್ ದೌರ್ಜನ್ಯ !
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಬಡ ಟೀ ಮಾರಾಟಗಾರನ ಮೇಲೆ ಪೊಲೀಸರು ಹಲ್ಲೆ ನಡೆಸಿದರೆಂಬ ಗಂಭೀರ ಆರೋಪ ಕೇಳಿಬಂದಿದೆ. ರಾತ್ರಿ ತಡವಾಗಿ ಅಂಗಡಿ ತೆರೆದಿಟ್ಟಿದ್ದ ಕಾರಣಕ್ಕೆ ಪೊಲೀಸರು ಆತನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. “ನನ್ನನ್ನು ಹೊಡೆಯಬೇಡಿ, ನಾನು ಕೇವಲ ಜೀವನ ನಡೆಸಲು ಪ್ರಯತ್ನಿಸುತ್ತಿದ್ದೇನೆ” ಎಂದು ಆ ಟೀ ಮಾರಾಟಗಾರ ಬೇಡಿಕೊಂಡಿದ್ದಾನೆ ಎನ್ನುವ ದೃಶ್ಯಗಳು ಜನರಲ್ಲಿ ಆಕ್ರೋಶ ಹುಟ್ಟಿಸಿದ್ದವು. ಬಡತನದಲ್ಲಿರುವ ವ್ಯಕ್ತಿ ತನ್ನ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿದ್ದಾಗ ಈ ರೀತಿಯ ವರ್ತನೆ ಸರಿಯೇ ಎಂಬ
Apr 261 min read


ಸುಖೋಯ್-30 ಯುದ್ಧವಿಮಾನ ಪತನ; ಇಬ್ಬರು ಪೈಲಟ್ಗಳು ಕಣ್ಮರೆ, ಶೋಧ ಕಾರ್ಯಾಚರಣೆ ಮುಂದುವರಿಕೆ
ಅಸ್ಸಾಂ ರಾಜ್ಯದಲ್ಲಿ ಭಾರತೀಯ ವಾಯುಪಡೆಯ ಸುಖೋಯ್-30 ಎಂಕೆಐ ಯುದ್ಧವಿಮಾನ ಪತನಗೊಂಡಿರುವ ಘಟನೆ ನಡೆದಿದೆ. Sukhoi Su‑30MKI ಯುದ್ಧವಿಮಾನ ಅಸ್ಸಾಂನ Jorhat ವಾಯುನೆಲೆಯಿಂದ ಗುರುವಾರ ಸಂಜೆ ತರಬೇತಿ ಹಾರಾಟಕ್ಕಾಗಿ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿದುಕೊಂಡಿತ್ತು. ನಂತರ ಅದು Karbi Anglong ಜಿಲ್ಲೆಯ ಬೆಟ್ಟ ಪ್ರದೇಶದಲ್ಲಿ ಪತನಗೊಂಡಿದೆ ಎಂದು Indian Air Force ಅಧಿಕೃತವಾಗಿ ತಿಳಿಸಿದೆ. ಮಾಹಿತಿಯ ಪ್ರಕಾರ, ಜೋರ್ಹಟ್ನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಯುದ್ಧವಿಮಾನವು ರಾತ್ರಿ ಸುಮಾರು 7.42ರವರೆಗೆ ರಾಡಾರ್
Mar 71 min read


WPL 2026 ಫೈನಲ್: ಡೆಲ್ಲಿ ಕ್ಯಾಪಿಟಲ್ಸ್ನ್ನು 6 ವಿಕೆಟ್ಗಳಿಂದ ಮಣಿಸಿದ RCB – ಎರಡನೇ ಬಾರಿ ಚಾಂಪಿಯನ್!
ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ RCB, ಮುಂಬೈ ಇಂಡಿಯನ್ಸ್ಗಳೊಂದಿಗೆ ಗರಿಷ್ಠ WPL ಪ್ರಶಸ್ತಿಗಳ ಸಂಖ್ಯೆಯಲ್ಲಿ ಸಮಬಲ ಸಾಧಿಸಿದೆ. RCB ನಾಯಕಿ ಸ್ಮೃತಿ ಮಂದಾನಾ ಅವರ ಚತುರ ನಾಯಕತ್ವದಲ್ಲಿ ತಂಡ ಸಂಪೂರ್ಣ ಟೂರ್ನಿಯಲ್ಲಿ ಶಿಸ್ತುಬದ್ಧ ಹಾಗೂ ಸಮತೋಲನ ಪ್ರದರ್ಶನ ನೀಡಿತು. ಲೀಗ್ ಹಂತದಲ್ಲೇ ಐದು ಜಯಗಳಿಸಿ WPL ಇತಿಹಾಸದಲ್ಲೇ ಮೊದಲ ತಂಡ ಎಂಬ ಗೌರವ ಪಡೆದ RCB, ಫೈನಲ್ನಲ್ಲೂ ಅದೇ ಆತ್ಮವಿಶ
Feb 51 min read


ಕೊಲ್ಲಮೊಗ್ರು : ಶೇಂದಿ ಇಳಿಸಲು ತೆಂಗಿನ ಮರವೇರಿದ್ದ ವ್ಯಕ್ತಿ ಮರದಲ್ಲೇ ಮೃತ
ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರ ಗ್ರಾಮದಲ್ಲಿ ತೆಂಗಿನ ಮರವೇರಿ ಶೇಂದಿ ಇಳಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯೋರ್ವರು ಮರದಲ್ಲೇ ಮೃತಪಟ್ಟ ದಾರುಣ ಘಟನೆ ಸೋಮವಾರ ನಡೆದಿದೆ. ಕೊಲ್ಲಮೊಗ್ರು ಸಮೀಪದ ಪನ್ನೆಯಲ್ಲಿ ವ್ಯಕ್ತಿಯೊಬ್ಬರ ಜಾಗದಲ್ಲಿ ಕೇರಳ ಮೂಲದ ಈ ವ್ಯಕ್ತಿಯು ಶೇಂದಿ ಮೂರ್ತೆ (ಶೇಂದಿ ಇಳಿಸುವ ಕಾಯಕ) ನಡೆಸುತ್ತಿದ್ದರು. ಎಂದಿನಂತೆ, ಸೋಮವಾರದಂದು ಕೂಡಾ ಶೇಂದಿ ಇಳಿಸುವ ಸಲುವಾಗಿ ಅವರು ತೆಂಗಿನ ಮರವನ್ನು ಏರಿದ್ದರು. ಆದರೆ, ಮರದ ಮೇಲೆ ಇರುವಾಗಲೇ ಅವರು ತೀವ್ರ ಅಸ್ವಸ್ಥಗೊಂಡಿದ್ದು, ಸಹಾಯಕ್ಕಾಗಿ ಕೂಗಿಕೊಂಡಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳೀಯ
Nov 25, 20251 min read


ವಿಡಿಯೋ ಮಾಡಿ ಸಮುದ್ರಕ್ಕೆ ಹಾರಲು ಹೋಗಿದ್ದ ತಂದೆ-ಮಗಳ ರಕ್ಷಣೆ; ಪೊಲೀಸರ ಸಮಯಪ್ರಜ್ಞೆಗೆ ಸಾರ್ವಜನಿಕರ ಮೆಚ್ಚುಗೆ
ಪತ್ನಿಯೊಂದಿಗೆ ಉಂಟಾಗಿದ್ದ ಮನಸ್ತಾಪದಿಂದ ಬೇಸತ್ತ ಪತಿಯೊಬ್ಬರು ತನ್ನ ನಾಲ್ಕು ವರ್ಷದ ಪುತ್ರಿಯೊಂದಿಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ, ಬಳಿಕ ಮನೆಗೆ ಬಂದು ನೇಣು ಹಾಕಿಕೊಳ್ಳಲು ಸಿದ್ಧವಾಗಿದ್ದ ಘಟನೆ ಮಂಗಳೂರಿನ ಕಾವೂರಿನಲ್ಲಿ ನಡೆದಿದೆ. ಸಾವಿಗೆ ಮುನ್ನ ವಿಡಿಯೋ ಮಾಡಿ ಅದನ್ನು ವಾಟ್ಸಪ್ ಗ್ರೂಪ್ಗಳಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಪಣಂಬೂರು ಪೊಲೀಸರಿಗೆ ತಲುಪಿದ ಕೂಡಲೇ ಅವರು ಸಮಯ ಪ್ರಜ್ಞೆ ಮೆರೆದು ತಂದೆ-ಮಗಳನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ರಕ್ಷಿಸಲ್ಪಟ್ಟ ವ್ಯಕ್ತಿಯು ಕಾವೂರು ಶಾಂತಿನಗರ ನಿವಾಸಿ ರಾಜೇಶ್ ಎಂದು ಗುರುತಿಸಲಾಗಿದೆ. ಏಳು ವರ್ಷಗಳ ಹಿಂದೆ
Nov 5, 20251 min read
Archive
bottom of page







