T20WC: ಜಿಂಬಾಬೈ ಎದುರು ಹೀನಾಯವಾಗಿ ಸೋತ ಆಸಿಸ್
- Feb 13
- 1 min read

ಟಿ20 ವಿಶ್ವಕಪ್‌ನ ಗ್ರೂಪ್ ಬಿ ಪಂದ್ಯದಲ್ಲಿ ಜಿಂಬಾಬೈ ತಂಡ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದೆ. 169 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 19.3 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಗಿ 23 ರನ್‌ಗಳ ಸೋಲು ಕಂಡಿತು.
ಜಿಂಬಾಬೈ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಲು ಇಳಿದ ಆಸ್ಟ್ರೇಲಿಯಾ ಆರಂಭದಿಂದಲೇ ಒತ್ತಡಕ್ಕೆ ಒಳಗಾಯಿತು. ಮಧ್ಯ ಕ್ರಮಾಂಕದಲ್ಲಿ ಮ್ಯಾಟ್ (65) ಮತ್ತು ಮ್ಯಾಕ್ಸ್‌ವೆಲ್ (31) ಹೋರಾಟ ನೀಡಿದರೂ, ಇತರ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
ಜಿಂಬಾಬೈ ಪರ ಬೌಲಿಂಗ್ ದಾಳಿಯಲ್ಲಿ ಮುಝರಬಾನಿ 4 ವಿಕೆಟ್‌ಗಳು ಪಡೆದು ಆಸಿಸ್ ಬ್ಯಾಟಿಂಗ್ ಬೆನ್ನು ಮುರಿದರು. ಜೊತೆಗೆ ಬ್ರಾಡ್ ಇವಾನ್ಸ್ 3 ವಿಕೆಟ್ ಕಿತ್ತು ಮಹತ್ವದ ಕೊಡುಗೆ ನೀಡಿದರು.
ಈ ಗೆಲುವಿನಿಂದ ಜಿಂಬಾಬೈ ತಂಡ ಗ್ರೂಪ್ ಬಿ ಪಾಯಿಂಟ್ ಪಟ್ಟಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಬಲಿಷ್ಠ ತಂಡವೆಂದು ಪರಿಗಣಿಸಲ್ಪಡುವ ಆಸ್ಟ್ರೇಲಿಯಾ ವಿರುದ್ಧದ ಈ ಜಯ ಜಿಂಬಾಬೈಗೆ ಆತ್ಮವಿಶ್ವಾಸ ಹೆಚ್ಚಿಸುವಂತಾಗಿದೆ.







Comments