ಯೂಟ್ಯೂಬರ್ ಮಧು ಗೌಡ ಪತಿ ನಿಖಿಲ್ ವಿರುದ್ಧ ಎಫ್‌ಐಆರ್: ಅಪಘಾತ ನಡೆಸಿ ಪರಾರಿಯಾದ ಆರೋಪ

ಮೈಸೂರು: ಪ್ರಸಿದ್ಧ ಯೂಟ್ಯೂಬರ್ ಮಧು ಗೌಡ ಅವರ ಪತಿ ನಿಖಿಲ್ ರವೀಂದ್ರ ವಿರುದ್ಧ ರಸ್ತೆ ಅಪಘಾತ ಎಸಗಿ ಸ್ಥಳದಿಂದ ಪರಾರಿಯಾದ ಆರೋಪ ಕೇಳಿಬಂದಿದೆ. ಈ ಸಂಬಂಧ ಮೈಸೂರಿನ ವಿ.ವಿ.ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಆಯುಧ ಪೂಜೆಯ ದಿನವಾದ ಅಕ್ಟೋಬರ್ 20ರ ಸಂಜೆ ನಡೆದಿದೆ. ಮರುದಿನ ನಡೆಯಲಿದ್ದ ತಮ್ಮ ಒಂಬತ್ತು ತಿಂಗಳ ಮಗುವಿನ ನಾಮಕರಣ ಕಾರ್ಯಕ್ರಮದ ಸಿದ್ಧತೆಗಾಗಿ ಛತ್ರಕ್ಕೆ ತೆರಳಿ ಮನೆಗೆ ವಾಪಸಾಗುತ್ತಿದ್ದ ಅಭಿಷೇಕ್ ಎಂಬುವವರ ಬೈಕ್‌ಗೆ ನಿಖಿಲ್ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ಭೀಕರ ಅಪಘಾತದಿಂದಾಗಿ ಗಾಯಾಳು ಅಭಿಷೇಕ್ ಅವರ ಕೈ ಮತ್ತು ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಮೂಳೆ ಮುರಿತ ಸಂಭವಿಸಿದೆ. ಅಪಘಾತದ ನಂತರ ಕಾರು ನಿಲ್ಲಿಸದೆ ತೆರಳಿದ ಆರೋಪ ನಿಖಿಲ್ ಮೇಲಿದೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಪೊಲೀಸರು ಪ್ರಕರಣದ ಸತ್ಯಾಸತ್ಯತೆ ತಿಳಿಯಲು ತೀವ್ರ ತನಿಖೆ ಕೈಗೊಂಡಿದ್ದಾರೆ.







Comments