ವಿಟ್ಲದಲ್ಲಿ ರಕ್ತದಾನ ಶಿಬಿರ ಸಂಪನ್ನ: ಯುವಜನತೆಯಿಂದ ಅಭೂತಪೂರ್ವ ಸ್ಪಂದನೆ

ವಿಟ್ಲ: ಬಾರ್ಬರಿಕ್ ಸೇನಾ ವಿಟ್ಲ ಹಾಗೂ ಮನ್ವಿತ್ ಸುವರ್ಣ ಅವರ ಸ್ಮರಣಾರ್ಥ, RMSA ಶಾಲೆ ಮತ್ತು ಮಂಗಳೂರಿನ ಭಾರತೀಯ ರೆಡ್ ಕ್ರಾಸ್ ರಕ್ತ ನಿಧಿ ಕೇಂದ್ರದ ಜಂಟಿ ಸಹಯೋಗದಲ್ಲಿ ನವೆಂಬರ್ 01, 2026ರ ಭಾನುವಾರದಂದು ಬೃಹತ್ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ವಿಟ್ಲದ RMSA ಮಾದರಿ ಶಾಲೆಯಲ್ಲಿ ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಟ್ಲ ಅರಮನೆಯ ಶ್ರೀ ಕೃಷ್ಣಯ್ಯ ಬಲ್ಲಾಳ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಮಂಗಳೂರು ಜಿಲ್ಲಾ ಕುಸ್ತಿ ಸಂಘದ ಉಪಾಧ್ಯಕ್ಷ ರಾಮದಾಸ್ ಶೆಟ್ಟಿ, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಹಾಗೂ VRC ವಿಟ್ಲ ಸ್ಥಾಪಕಾಧ್ಯಕ್ಷ ರಮಾನಾಥ ವಿಟ್ಲ ಭಾಗವಹಿಸಿದ್ದರು.
ಅಲ್ಲದೆ, ಪಟ್ಟಣ ಪಂಚಾಯತ್ ಸದಸ್ಯ ರವೀಶ್ ವಿಟ್ಲ, SDMC ಅಧ್ಯಕ್ಷ ರವಿಶಂಕರ್ ಶಾಸ್ತ್ರಿ, ಶಾಲೆಯ ಮುಖ್ಯ ಶಿಕ್ಷಕಿ ವಾರಿಜ, ಸೋಶಿಯಲ್ ಮೀಡಿಯಾ ಪ್ರಮುಖ ಭರತೇಶ್ ನೆಲ್ಯಾಡಿ, D. GROUP ಅಧ್ಯಕ್ಷ ಶಾಕೀರ್ ಅಳಕೆಮಜಲು ಮತ್ತು ಬಾರ್ಬರಿಕ್ ಸೇನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ರಕ್ತದಾನ ಶಿಬಿರದಲ್ಲಿ ಅನೇಕ ಯುವಕರು ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡಿದರು.







Comments