ಮಂಗಳೂರು ಸೆಂಟ್ರಲ್ ಮತ್ತು ಸುಬ್ರಹ್ಮಣ್ಯ ರೈಲು ಸಂಚಾರ ರದ್ದು: ಪ್ರಯಾಣಿಕರಿಗೆ ಮುನ್ಸೂಚನೆ
- Mar 22
- 1 min read

ನರಿಮೊಗರು ಮತ್ತು ಪಡೀಲ್ ನಿಲ್ದಾಣಗಳ ನಡುವೆ ರೈಲ್ವೆ ಹಳಿ ನಿರ್ವಹಣಾ ಕಾರ್ಯ (BCM) ನಡೆಯಲಿರುವ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ಪ್ಯಾಸೆಂಜರ್ ರೈಲು (ಸಂಖ್ಯೆ 56629) ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಮಾರ್ಚ್ 23 ರಿಂದ ಏಪ್ರಿಲ್ 14 ರವರೆಗೆ ಮೊದಲ ಹಂತದ ಸೇವೆ ಸ್ಥಗಿತಗೊಳ್ಳಲಿದ್ದು, ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ.

ದ್ವಿತೀಯ ಹಂತದಲ್ಲಿ ಜೂನ್ 10 ರಿಂದ ಜೂನ್ 21 ರವರೆಗೆ ರೈಲು ಸಂಚಾರ ಮತ್ತೆ ರದ್ದಾಗಲಿದೆ. ಹಳಿಗಳ ಬಲವರ್ಧನೆಗಾಗಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಅನಿವಾರ್ಯವಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಈ ಹಠಾತ್ ಬದಲಾವಣೆಯಿಂದ ಪ್ರತಿದಿನ ಸಂಚರಿಸುವ ಉದ್ಯೋಗಿಗಳು ಹಾಗೂ ಭಕ್ತಾದಿಗಳಿಗೆ ತುಸು ಅನಾನುಕೂಲವಾಗುವ ಸಾಧ್ಯತೆಯಿದೆ.







Comments