ಟಾಟಾ ಟ್ರಸ್ಟ್ ವಿವಾದ: ಟ್ರಸ್ಟೀ ಸ್ಥಾನಕ್ಕೆ ವೇಣು ಶ್ರೀನಿವಾಸನ್ ರಾಜೀನಾಮೆ, ನೇಮಕಾತಿ ಅಕ್ರಮದ ಆರೋಪ
- Apr 5
- 1 min read

ಟಾಟಾ ಟ್ರಸ್ಟ್ಸ್ ನಡಿಯಲ್ಲಿ ಬರುವ ಬಾಯಿ ಹೀರಾಬಾಯಿ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟೀ ಸ್ಥಾನದಿಂದ ವೇಣು ಶ್ರೀನಿವಾಸನ್ ಹಿಂದೆ ಸರಿದಿದ್ದಾರೆ. ಟ್ರಸ್ಟ್ ನಿಯಮಗಳ ಪ್ರಕಾರ, ಟ್ರಸ್ಟೀ ಸ್ಥಾನ ಕೇವಲ ಪಾರ್ಸಿ ಸಮುದಾಯಕ್ಕೆ ಮೀಸಲಾಗಿದ್ದರೂ, ಶ್ರೀನಿವಾಸನ್ ಅವರ ನೇಮಕ ಆಗಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು.

ಈ ನೇಮಕಾತಿಯನ್ನು ಮಾಜಿ ಟ್ರಸ್ಟೀ ಮೆಹ್ಲಿ ಮಿಸ್ತ್ರಿ ಮಹಾರಾಷ್ಟ್ರ ಚಾರಿಟಿ ಕಮಿಷನರ್ ಮುಂದೆ ಪ್ರಶ್ನಿಸಿದ್ದರು. ನಿಯಮ ಬಾಹಿರ ನೇಮಕಾತಿಗಳ ವಿರುದ್ಧ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ. ಶ್ರೀನಿವಾಸನ್ ರಾಜೀನಾಮೆಯಿಂದ ಟ್ರಸ್ಟ್‌ನಲ್ಲಿನ ವಿವಾದ ಹೊಸ ತಿರುವು ಪಡೆದಿದೆ.







Comments