ಅಬುಧಾಬಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ವಿಟ್ಲದ ಶ್ರೀಲಕ್ಷ್ಮಿ
- 11 hours ago
- 1 min read

ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಚಿನ್ನ, ಎರಡು ಬೆಳ್ಳಿ, ಒಂದು ಕಂಚು ಪದಕ ಜಯ
ಅಬುಧಾಬಿ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಕ್ರೀಡಾಪಟುಗಳು ಮಿಂಚುತ್ತಿರುವಾಗ, ಪ್ರತಿಭಾವಂತ ಈಜುಗಾರ್ತಿ ಶ್ರೀಲಕ್ಷ್ಮಿ ಅವರು ವಿಶಿಷ್ಟ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
International Masters Games Association ವತಿಯಿಂದ ಆಯೋಜಿಸಲ್ಪಟ್ಟ ಕ್ರೀಡಾಕೂಟವು Mohammed Bin Zayed City Swimming Pool ನಲ್ಲಿ ನಡೆಯಿತು. ವಿಶ್ವದ ವಿವಿಧ ದೇಶಗಳಿಂದ ಭಾಗವಹಿಸಿದ್ದ ಪ್ರತಿಭಾವಂತ ಈಜುಗಾರರ ನಡುವೆ ಶ್ರೀಲಕ್ಷ್ಮಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ನಾಲ್ಕು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಚಿನ್ನದ ಪದಕ,
200 ಮೀ. ಬ್ರೆಸ್ಟ್‌ಸ್ಟ್ರೋಕ್ ಹಾಗೂ 100 ಮೀ. ಬಟರ್‌ಫ್ಲೈ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ,
100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಕಂಚಿನ ಪದಕ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ

ವಿಟ್ಲದ ಕೋಟಿಕೆರೆ ಮೂಲದ ಗೋಪಾಲ ಸಪಲ್ಯ ಮತ್ತು ಲೀಲಾವತಿ ದಂಪತಿಯ ಕಿರಿಯ ಪುತ್ರಿಯಾಗಿರುವ ಶ್ರೀಲಕ್ಷ್ಮಿ ವಿಟ್ಲ, ಈಜನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡು ಅತ್ಯುತ್ತಮ ಈಜು ತರಬೇತುಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿನ ಅವರ ಶ್ಲಾಘನೀಯ ಪ್ರದರ್ಶನದಿಂದಾಗಿ, ಅವರ ಜನ್ಮಸ್ಥಳವಾದ ಕೋಟಿಕೆರೆ, ವಿಟ್ಲವು ಅಂತರರಾಷ್ಟ್ರೀಯಈ ಸಾಧನೆಯ ಮೂಲಕ ಶ್ರೀಲಕ್ಷ್ಮಿ ಅವರು ಪದಕ ಗೆಲುವಿನ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಅವರ ಪರಿಶ್ರಮ ಮತ್ತು ಶಿಸ್ತುಬದ್ಧ ತರಬೇತಿಯ ಫಲವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವುದು ರಾಜ್ಯಕ್ಕೂ ದೇಶಕ್ಕೂ ಹೆಮ್ಮೆಯ ವಿಷಯವಾಗಿದೆ. ಗುರುತಿಸುವಂತಾಗಿದೆ.
ಪ್ರಸ್ತುತ ಅವರು ‘ವನ್ ಅಕ್ವಾ ಸೆಂಟರ್’ನಲ್ಲಿ ಈಜು ತರಬೇತುದಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹಲವಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.






Comments