ರಸ್ತೆ ಅಪಘಾತ: ಗಾಯಾಳು ರಕ್ಷಿಸಿದರೆ ಸಿಗಲಿದೆ ₹25 ಸಾವಿರ ಬಹುಮಾನ!
- Jun 11
- 1 min read

ರಸ್ತೆ ಅಪಘಾತಕ್ಕೊಳಗಾದವರನ್ನು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿ ನೆರವು ನೀಡುವವರಿಗಾಗಿ ಕೇಂದ್ರ ಸರ್ಕಾರ 'ರಹಾ-ವೀರ್' ಯೋಜನೆ ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಜೀವ ಉಳಿಸಿದವರಿಗೆ 25 ಸಾವಿರ ರೂಪಾಯಿ ನಗದು ಬಹುಮಾನ ಹಾಗೂ ಕಾನೂನಿನ ರಕ್ಷಣೆ ಸಿಗಲಿದೆ.
ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆಯನ್ನು 'ಗೋಲ್ಡನ್ ಅವರ್' ಎನ್ನಲಾಗುತ್ತದೆ. ಈ ಅವಧಿಯಲ್ಲಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿದರೆ ಪ್ರಾಣ ಉಳಿಸಬಹುದು. ಇದಕ್ಕೆ ಯಾವುದೇ ವೈದ್ಯಕೀಯ ತರಬೇತಿ ಬೇಡ, ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿಸಿದರೆ ಸಾಕು.
ಪೊಲೀಸ್ ಕಿರಿಕಿರಿ ಹಾಗೂ ಕೋರ್ಟ್ ಅಲೆದಾಟದ ಭಯದಿಂದ ಜನ ಸಹಾಯ ಮಾಡಲು ಹಿಂಜರಿಯುತ್ತಿದ್ದಾರೆ. ಈ ಭಯವನ್ನು ಹೋಗಲಾಡಿಸಿ, ಅಪಘಾತಗಳಿಂದ ದೇಶದ ಜಿಡಿಪಿಗೆ ಆಗುತ್ತಿರುವ ಶೇ.3ರಷ್ಟು ನಷ್ಟವನ್ನು ತಪ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.







Comments