ಪೆರಾಜೆ: ಪಾಳುಬಾವಿಗೆ ಬಿದ್ದ ಆನೆಮರಿ; ಅರಣ್ಯ ಇಲಾಖೆಯಿಂದ ರಕ್ಷಣಾ ಕಾರ್ಯಾಚರಣೆ

ಪೆರಾಜೆಯ ಕಲ್ಬರ್ಪೆ ನಿವಾಸಿ ದಮಯಂತಿ ಎಂಬುವವರ ತೋಟದ ಪಾಳುಬಾವಿಗೆ ಕಳೆದ ರಾತ್ರಿ ಆನೆಮರಿಯೊಂದು ಆಕಸ್ಮಿಕವಾಗಿ ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು, ಮರಿಯನ್ನು ಸುರಕ್ಷಿತವಾಗಿ ಹೊರತರಲು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ.

ಆನೆಮರಿಯನ್ನು ಮೇಲೆತ್ತಲು ಸ್ಥಳಕ್ಕೆ ಹಿಟಾಚಿ ಯಂತ್ರವನ್ನು ತರಿಸಲಾಗಿದ್ದು, ಬಾವಿಯ ಪಾರ್ಶ್ವದಲ್ಲಿ ಮಣ್ಣು ಅಗೆದು ದಾರಿ ಮಾಡಿಕೊಡಲಾಗುತ್ತಿದೆ. ತಾಯಿ ಆನೆಯು ಹತ್ತಿರದಲ್ಲೇ ಇರುವ ಸಾಧ್ಯತೆಯಿರುವುದರಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಅಧಿಕಾರಿಗಳು ಶೀಘ್ರದಲ್ಲೇ ಆನೆಮರಿಯನ್ನು ರಕ್ಷಿಸಿ ಕಾಡಿಗೆ ಬಿಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.







Comments