ನವ ಮಂಗಳೂರು ಬಂದರಿನಲ್ಲಿ ಉದ್ಯೋಗಾವಕಾಶ – NMPAಯಲ್ಲಿ 12 ಮ್ಯಾನೇಜರ್ ಹುದ್ದೆಗಳ ಭರ್ತಿ ಅರ್ಜಿ ಅಹ್ವಾನ

ಮಂಗಳೂರು: New Mangalore Port Authority (NMPA) ವತಿಯಿಂದ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ. ಒಟ್ಟು 12 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಕೇಂದ್ರ ಸರ್ಕಾರದ ಅಡಿಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಈ ನೇಮಕಾತಿಯಲ್ಲಿ ಐಸಿಟಿ (ICT), ಲೀಗಲ್ (Legal), ಪರಿಸರ (Environment) ಹಾಗೂ ಬಿಸಿನೆಸ್ ಡೆವಲಪ್‌ಮೆಂಟ್ (Business Development) ವಿಭಾಗಗಳಲ್ಲಿ ಹುದ್ದೆಗಳು ಲಭ್ಯವಿವೆ. ಮಂಗಳೂರಿನ ಪ್ರಮುಖ ಬಂದರು ಸಂಸ್ಥೆಯಲ್ಲಿ ಸ್ಥಿರ ಉದ್ಯೋಗ ಮತ್ತು ಆಕರ್ಷಕ ವೇತನದೊಂದಿಗೆ ವೃತ್ತಿಜೀವನ ರೂಪಿಸಿಕೊಳ್ಳಲು ಇದು ಸುವರ್ಣಾವಕಾಶವಾಗಿದೆ.
ಶೈಕ್ಷಣಿಕ ಅರ್ಹತೆ: ಪ್ರತಿ ಹುದ್ದೆಗೆ ಸಂಬಂಧಿತ ವಿದ್ಯಾರ್ಹತೆ ಕಡ್ಡಾಯವಾಗಿದೆ.
ICT ವಿಭಾಗಕ್ಕೆ ಬಿ.ಇ / ಬಿ.ಟೆಕ್
ಲೀಗಲ್ ವಿಭಾಗಕ್ಕೆ ಕಾನೂನು ಪದವಿ
ಪರಿಸರ ವಿಭಾಗಕ್ಕೆ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ
ಬಿಸಿನೆಸ್ ಡೆವಲಪ್‌ಮೆಂಟ್‌ಗೆ ಎಂಬಿಎ
ವಯೋಮಿತಿ:
ಚೀಫ್ ಮ್ಯಾನೇಜರ್ – ಗರಿಷ್ಠ 55 ವರ್ಷ
ಸೀನಿಯರ್ ಮ್ಯಾನೇಜರ್ – ಗರಿಷ್ಠ 45 ವರ್ಷ
ಮ್ಯಾನೇಜರ್ – ಗರಿಷ್ಠ 40 ವರ್ಷ
(ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ಸಡಿಲಿಕೆ)
ವೇತನ ಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಮಾನದಂಡದಂತೆ ಆಕರ್ಷಕ ವೇತನ ನೀಡಲಾಗುತ್ತದೆ.
ಚೀಫ್ ಮ್ಯಾನೇಜರ್ – ₹2 ಲಕ್ಷ (ಸುಮಾರು)
ಸೀನಿಯರ್ ಮ್ಯಾನೇಜರ್ – ₹1.60 ಲಕ್ಷ
ಮ್ಯಾನೇಜರ್ – ₹1.20 ಲಕ್ಷ
ಆಯ್ಕೆ ವಿಧಾನ: ಅಭ್ಯರ್ಥಿಗಳ ಅರ್ಜಿಗಳನ್ನು ಮೊದಲಿಗೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಅರ್ಹ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಅರ್ಜಿಯ ವಿಧಾನ: ಆಸಕ್ತ ಅಭ್ಯರ್ಥಿಗಳು New Mangalore Port Authority ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.







Comments