ಖಿನ್ನತೆಗೆ ಬಲಿಯಾಯಿತೇ ಮತ್ತೊಂದು ಜೀವ? ಕಡಬದ ಯುವಕನ ದುರಂತ ಅಂತ್ಯ

ಕಡಬದ ಪುಳಿಕುಕ್ಕು ಸಮೀಪ ಮಡಪ್ಪಾಡಿ ಗ್ರಾಮದ ಕಿಶನ್ ಎ ಹೆಚ್ (32) ಎಂಬ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುತ್ತಿಗಾರಿನ ಬ್ಯಾಂಕೊಂದರಲ್ಲಿ ಲೋನ್ ಆಫೀಸರ್ ಆಗಿದ್ದ ಇವರು, ಕಳೆದ ಕೆಲವು ಸಮಯದಿಂದ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಾರ್ಚ್ 21ರಂದು ವಿಷ ಸೇವಿಸಿದ್ದ ಇವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸುಮಾರು 20 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ಕಿಶನ್, ಏಪ್ರಿಲ್ 14ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರ ಸಹೋದರ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.







Comments