;
top of page

ಕಡಬ: ಬ್ಯಾಂಕ್‌ಗೆ ನಕಲಿ ಚಿನ್ನವಿಟ್ಟು ವಂಚಿಸಲು ಯತ್ನ; ಇಬ್ಬರು ಕಿರಾತಕರ ಬಂಧನ!

  • Jul 6
  • 1 min read

ಕಡಬ ಪಟ್ಟಣದ ಬ್ಯಾಂಕ್ ಒಂದರಲ್ಲಿ ಕೃತಕವಾಗಿ ತೂಕ ಹೆಚ್ಚಿಸಲಾದ ಚಿನ್ನದ ಆಭರಣಗಳನ್ನು ಅಡವಿಟ್ಟು, ಬ್ಯಾಂಕ್ ಅಧಿಕಾರಿಗಳನ್ನು ವಂಚಿಸಿ ಹಣ ಪಡೆಯಲು ಯತ್ನಿಸಿದ್ದ ಭಾರಿ ಸಂಚೊಂದನ್ನು ಕಡಬ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಜುಲೈ 3ರ ಶುಕ್ರವಾರದಂದು ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ಈ ವಂಚನೆಯ ಜಾಲ ಬೆಳಕಿಗೆ ಬಂದಿದೆ.

ಆರೋಪಿಗಳು ಬ್ಯಾಂಕ್‌ನಲ್ಲಿ ಸುಮಾರು 120 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಅಡವಿಟ್ಟು ಸಾಲ ಪಡೆಯಲು ಬಂದಿರುವುದಾಗಿ ತಿಳಿಸಿದ್ದರು. ಠಾಣೆಯ ಪಿಎಸ್‌ಐ ಜಂಬುರಾಜ್ ಮಹಾಜನ್ ಅವರು ತಪಾಸಣೆ ನಡೆಸಿದಾಗ, ಆಭರಣಗಳ ಒಳಭಾಗಕ್ಕೆ ಯಾವುದೋ ಅನ್ಯ ಲೋಹವನ್ನು (ಮೆಟಲ್) ಸೇರಿಸಿ, ಕೃತಕವಾಗಿ ಹೆಚ್ಚು ತೂಕ ಬರುವಂತೆ ಮಾರ್ಪಡಿಸಿರುವುದು ಪತ್ತೆಯಾಗಿದೆ. ಕಡಬದ ಬೇರೆ ಬೇರೆ ಬ್ಯಾಂಕುಗಳು ಇವರನ್ನು ಕಂಡು ಅನುಮಾನಗೊಂಡಿದ್ದರಿಂದ ಇವರ ಸಂಚು ವಿಫಲವಾಗಿತ್ತು.

ಕಡಿಮೆ ಮೌಲ್ಯದ ಆಭರಣಗಳಿಗೆ ಮೆಟಲ್ ಬೆರೆಸಿ ತೂಕ ಹೆಚ್ಚಿಸಿ, ಬ್ಯಾಂಕ್ ಅಧಿಕಾರಿಗಳನ್ನು ವಂಚಿಸುವ ದುರುದ್ದೇಶದಿಂದಲೇ ಕಡಬಕ್ಕೆ ಬಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS-2023)ಯ ಕಲಂ 318(4) ಹಾಗೂ ಕಲಂ 62 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.


Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page