;
top of page

ಇಂದಿನ ರಾಶಿಫಲ | ಎಲ್ಲಾ 12 ರಾಶಿಗಳಿಗೆ ಫಲಾಫಲ

  • Writer: sathyapathanewsplu
    sathyapathanewsplu
  • Jan 24
  • 2 min read

ಮೇಷ ರಾಶಿ

ನೀರಿನ ಪ್ರದೇಶಗಳಲ್ಲಿ ಇಂದು ವಿಶೇಷ ಎಚ್ಚರಿಕೆ ಅಗತ್ಯ. ಸರ್ಕಾರದಿಂದ ಬರುವ ಗೌರವ ಅಥವಾ ಅವಕಾಶವನ್ನು ತಳ್ಳಿಹಾಕುವ ಸಾಧ್ಯತೆ ಇದೆ. ಹೂಡಿಕೆ ವಿಷಯದಲ್ಲಿ ಯಾರಾದರೂ ತಪ್ಪು ದಾರಿಯತ್ತ ನಿಮ್ಮನ್ನು ಕರೆದೊಯ್ಯಬಹುದು. ಉದ್ಯಮಿಗಳ ಭೇಟಿಯಿಂದ ಹೊಸ ಅವಕಾಶಗಳ ಸುಳಿವು ಸಿಗಲಿದೆ. ಭೂ ಖರೀದಿಗೆ ಇದು ಉತ್ತಮ ಸಮಯ. ಯೋಗಾಭ್ಯಾಸದಿಂದ ಮನಸ್ಸಿನ ಅಶಾಂತಿ ಕಡಿಮೆಯಾಗಲಿದೆ. ಕೆಲವರು ನಿಮ್ಮನ್ನು ಮಾತಿನಿಂದಲೇ ನಿಯಂತ್ರಿಸಲು ಪ್ರಯತ್ನಿಸಬಹುದು.

ವೃಷಭ ರಾಶಿ

ಆಸ್ತಿ ಗಳಿಕೆಯ ಕುರಿತು ಗಂಭೀರ ಚಿಂತನೆ ನಡೆಸುವಿರಿ. ಎಲ್ಲ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಒಳಿತಲ್ಲ. ಅನಗತ್ಯ ಗೊಂದಲಗಳನ್ನು ತಪ್ಪಿಸುವುದು ಉತ್ತಮ. ನಿಮ್ಮ ಶಿಸ್ತು ಕೆಲವರಿಗೆ ಅಸಹನೀಯವಾಗಬಹುದು. ಮನೆಗೆ ಬಂದ ಅತಿಥಿಗಳಿಗೆ ಉತ್ತಮ ಆತಿಥ್ಯ ನೀಡುವಿರಿ. ನೀವು ಇರುವ ಸ್ಥಳದಲ್ಲೇ ನಿಮ್ಮ ಅನುಕೂಲಕ್ಕೆ ತಕ್ಕ ವಾತಾವರಣ ನಿರ್ಮಿಸಿಕೊಳ್ಳುವಿರಿ.

ಮಿಥುನ ರಾಶಿ

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿರುವವರಿಗೆ ಲಾಭದ ದಿನ. ಪ್ರಯತ್ನಿಸಿದ ಕೆಲ ಕಾರ್ಯಗಳಿಗೆ ದೈವಬಲ ಕಡಿಮೆಯಾಗುವ ಸಾಧ್ಯತೆ ಇದೆ. ಹೊಸ ಯೋಜನೆಗಳು ಕೈಗೆ ಸಿಗಲಿವೆ. ಉದ್ಯೋಗದಲ್ಲಿ ಉತ್ತಮ ಪ್ರಗತಿ ಕಾಣಬಹುದು. ಹೂಡಿಕೆಗಳಿಂದ ನಿರೀಕ್ಷಿತ ಲಾಭ ತಡವಾಗಬಹುದು. ಕಲಾವಿದರಿಗೆ ಪ್ರಶಂಸೆ ಲಭಿಸುತ್ತದೆ. ಹಣ ಇದ್ದರೂ ಸಮಯಕ್ಕೆ ಸಿಗದ ಕಾರಣ ಸಾಲ ಮಾಡುವ ಪರಿಸ್ಥಿತಿ ಉಂಟಾಗಬಹುದು.

ಕರ್ಕಾಟಕ ರಾಶಿ

ಸ್ಪರ್ಧೆಗೆ ಮಾಡಿದ ಶ್ರಮ ನಿರೀಕ್ಷಿತ ಫಲ ನೀಡದೇ ಹೋಗಬಹುದು. ಸಂಬಂಧಗಳಲ್ಲಿ ಭಾವನಾತ್ಮಕ ದೂರ ಹೆಚ್ಚಾಗುವ ಸಾಧ್ಯತೆ. ಆಲಸ್ಯದಿಂದ ಅಮೂಲ್ಯ ಸಮಯ ವ್ಯರ್ಥವಾಗಲಿದೆ. ಆಸ್ತಿ ವಿಚಾರವಾಗಿ ನೆರೆಯವರೊಂದಿಗೆ ಕಲಹ ಉಂಟಾಗಬಹುದು. ಸಂಗಾತಿಯಿಂದ ಆರ್ಥಿಕ ಸಹಾಯ ಬಯಸುವಿರಿ. ಅನುಮಾನ ಸ್ವಭಾವ ಹೆಚ್ಚಾಗಬಹುದು. ರತ್ನ ಧಾರಣೆ ಮಾಡುವವರು ಪರೀಕ್ಷಿಸಿ ಮಾತ್ರ ಖರೀದಿಸಿ.

ಸಿಂಹ ರಾಶಿ

ಎಲ್ಲವೂ ಕೈಮೀರಿದಂತೆ ಭಾಸವಾಗಬಹುದು. ಉತ್ತರ ಸಿಗದ ಪ್ರಶ್ನೆಗಳು ಮನಸ್ಸನ್ನು ಕಾಡಲಿವೆ. ವಾಸಸ್ಥಳ ಬದಲಾಯಿಸುವ ಪರಿಸ್ಥಿತಿ ಎದುರಾಗಬಹುದು. ನಂಬಿದ್ದವರು ದೂರವಾಗುವ ಸಾಧ್ಯತೆ ಇದೆ. ಹಿತಶತ್ರುಗಳಿಂದ ಅಪಕೀರ್ತಿ ಸಂಭವಿಸಬಹುದು. ನಿಮ್ಮ ಆಸೆಗಳನ್ನು ಯಾರಿಗೂ ಹೇಳದೆ ಒಳಗೇ ಇಟ್ಟುಕೊಳ್ಳುವಿರಿ. ಸಣ್ಣ ವಿಷಯಕ್ಕೂ ಕೋಪ ಹೆಚ್ಚಾಗಬಹುದು.

ಕನ್ಯಾ ರಾಶಿ

ವೃತ್ತಿಯಲ್ಲಿ ಒಂದೇ ಕೆಲಸ ಪುನರಾವರ್ತನೆಯಾಗಲಿದೆ. ದಿನನಿತ್ಯದ ಕೆಲಸದಲ್ಲೇ ಸಮಯ ಕಳೆದುಹೋಗುತ್ತದೆ. ಹಣಕಾಸಿನ ವಿವಾದಕ್ಕೆ ಕಾನೂನು ನೆರವು ಅಗತ್ಯವಾಗಬಹುದು. ಸಾಲದಿಂದ ಮುಕ್ತಿ ದೊರೆತ ಕಾರಣ ಕುಟುಂಬದಲ್ಲಿ ನೆಮ್ಮದಿ. ಅಪೂರ್ಣ ಕೆಲಸಗಳಿಂದ ಅಸಮಾಧಾನ ಕಾಡಬಹುದು. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಕುಟುಂಬ ಕಾರಣದಿಂದ ಪ್ರಯಾಣ ಸಾಧ್ಯತೆ.

ತುಲಾ ರಾಶಿ

ಸಮಯಪ್ರಜ್ಞೆಯಿಂದ ಕೆಲಸ ಮಾಡಿ ಯಶಸ್ಸು ಪಡೆಯುವಿರಿ. ಪಾಲುದಾರಿಕೆಯ ಭೂ ವ್ಯವಹಾರಗಳಿಂದ ಲಾಭ. ಧಾರ್ಮಿಕ ಕಾರ್ಯಗಳನ್ನು ನೆರವೇರಿಸುವಿರಿ. ದಾಂಪತ್ಯ ಜೀವನದಲ್ಲಿ ಸೌಹಾರ್ದ ವಾತಾವರಣ. ಮಕ್ಕಳ ವಿಚಾರದಲ್ಲಿ ಅನಗತ್ಯ ಖರ್ಚು ತಪ್ಪಿಸಿ. ಮೌನವೇ ಕೆಲವೊಮ್ಮೆ ತಪ್ಪಾಗಿ ಅರ್ಥವಾಗಬಹುದು. ಸಮಯ ಪಾಲನೆ ಅತ್ಯಂತ ಮುಖ್ಯ.

ವೃಶ್ಚಿಕ ರಾಶಿ

ಇಷ್ಟದ ಕಾರ್ಯ ಯಶಸ್ವಿಯಾಗಿ ಉತ್ಸಾಹ ಹೆಚ್ಚಲಿದೆ. ನಿಮ್ಮ ಕೆಲವು ವರ್ತನೆಗಳಿಗೆ ಮಿತ್ರರಿಂದ ವಿರೋಧ ವ್ಯಕ್ತವಾಗಬಹುದು. ವಿವಿಧ ಮೂಲಗಳಿಂದ ಒಂದೇ ರೀತಿಯ ಸಲಹೆಗಳು ದೊರೆಯುತ್ತವೆ. ಬಂಧುಗಳ ಸಹಾಯದಿಂದ ವಿವಾಹ ಮಾತುಕತೆ ಮುಂದುವರಿಯಬಹುದು. ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಸಂಗಾತಿಯಿಂದ ಪ್ರೋತ್ಸಾಹ ಸಿಗುತ್ತದೆ.

ಧನು ರಾಶಿ

ಕೆಲವು ವಿಷಯಗಳನ್ನು ತಪ್ಪಿಸಿಕೊಳ್ಳಲು ನೆಪ ಹೇಳುವಿರಿ. ಸಮಾರಂಭದಲ್ಲಿ ಹಳೆಯ ಸ್ನೇಹಿತರ ಭೇಟಿಯಾಗಲಿದೆ. ಆಕಸ್ಮಿಕ ಧನಪ್ರಾಪ್ತಿ ಸಂತಸ ನೀಡಲಿದೆ. ವ್ಯವಹಾರದಲ್ಲಿ ಮಾತಿನ ಚಾತುರ್ಯದಿಂದ ಲಾಭ ಪಡೆಯುವಿರಿ. ಮನಸ್ಸಿಗೆ ಸಂಪೂರ್ಣ ಒಪ್ಪಿಗೆಯಿದ್ದರೆ ಮಾತ್ರ ಹೊಸ ಕಾರ್ಯಕ್ಕೆ ಕೈ ಹಾಕಿ. ಉದ್ಯೋಗ ಇಲ್ಲದಿರುವುದು ಮನಸ್ಸಿಗೆ ನೋವು ತರಬಹುದು.

ಮಕರ ರಾಶಿ

ಸ್ತ್ರೀಯರಿಗೆ ಕೆಲಸದ ಸ್ಥಳದಲ್ಲಿ ಮಾನಸಿಕ ಒತ್ತಡ ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಅನಗತ್ಯ ಭಯ ಕಾಡಬಹುದು. ಸ್ವಂತ ವಸ್ತುಗಳ ಮೇಲೆ ಅತಿಯಾದ ಆಸಕ್ತಿ ಕಾಣಿಸಬಹುದು. ಮಿತ್ರರಿಂದ ಹಣಕಾಸು ಸಹಾಯ ದೊರೆಯುವ ಸಾಧ್ಯತೆ. ಸಾರ್ವಜನಿಕವಾಗಿ ಅವಮಾನ ಸಂಭವಿಸಬಹುದು. ಸಂಗಾತಿಯ ಭಾವನೆಗಳಿಗೆ ಸ್ಪಂದಿಸದಿದ್ದರೆ ಕಲಹ ಉಂಟಾಗಬಹುದು.

ಕುಂಭ ರಾಶಿ

ಉನ್ನತ ಸ್ಥಾನಕ್ಕೆ ತಲುಪಲು ಅಪವಾದಗಳನ್ನು ನಿವಾರಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಮಹತ್ವದ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಆದಾಯಕ್ಕೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ವಿದೇಶಿ ವ್ಯವಹಾರದಲ್ಲಿ ಪಾಲುದಾರಿಕೆ ಸಾಧ್ಯತೆ. ವೃತ್ತಿಯ ಹೊರಗಿನ ಅವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು. ಸಹನೆ ಅತ್ಯಂತ ಅಗತ್ಯ.

ಮೀನ ರಾಶಿ

ಹಿರಿಯರನ್ನು ಭೇಟಿಯಾಗಿ ಭೂ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವುದು ಒಳಿತು. ಅಪರೂಪದ ವ್ಯಕ್ತಿಗಳ ಸಂಪರ್ಕ ಸಿಗಲಿದೆ. ಉನ್ನತ ಶಿಕ್ಷಣಕ್ಕಾಗಿ ದೂರ ಉಳಿಯುವ ಸಾಧ್ಯತೆ. ಕೆಲಸಕ್ಕಾಗಿ ಹೆಚ್ಚು ಓಡಾಟ ಅನಿವಾರ್ಯ. ಶತ್ರುಗಳೊಂದಿಗೆ ಮುಖಾಮುಖಿ ಪರಿಸ್ಥಿತಿ ಎದುರಾಗಬಹುದು. ಮಾತಿನಲ್ಲಿ ಎಚ್ಚರ ಅಗತ್ಯ. ಒತ್ತಾಯದಿಂದ ಸಮಾರಂಭಗಳಿಗೆ ಹೋಗುವಿರಿ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page