ಜನರ ಸಂಕಷ್ಟ ಮರೆತ ಜನಪ್ರತಿನಿಧಿಗಳು: ಎಲ್‌ಪಿಜಿಗಾಗಿ ಜನ ಕ್ಯೂ ನಿಂತರೆ, ಐಪಿಎಲ್ ಟಿಕೆಟ್‌ಗಾಗಿ ಪಿಎಗಳನ್ನು ಸಾಲಿನಲ್ಲಿ ನಿಲ್ಲಿಸಿದ ಶಾಸಕರು!

ರಾಜ್ಯದಲ್ಲಿ ಎಲ್‌ಪಿಜಿ ಗ್ಯಾಸ್‌ಗಾಗಿ ಜನ ಸಾಮಾನ್ಯರು ರಾತ್ರಿ ಇಡೀ ಕ್ಯೂ ನಿಂತು ಪರದಾಡುತ್ತಿದ್ದರೆ, ಇತ್ತ ಜನಪ್ರತಿನಿಧಿಗಳು ಐಪಿಎಲ್ ಕ್ರಿಕೆಟ್ ಪಂದ್ಯದ ಮೋಜಿನಲ್ಲಿ ಮಿಂದೇಳುತ್ತಿದ್ದಾರೆ. ನಾಳೆ ನಡೆಯಲಿರುವ ಬೆಂಗಳೂರು ಮತ್ತು ಚೆನ್ನೈ ನಡುವಿನ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಪಡೆಯಲು ಶಾಸಕರು ತಮ್ಮ ಆಪ್ತ ಸಹಾಯಕರನ್ನು (ಪಿಎ) ವಿಧಾನಸೌಧದಲ್ಲಿ ಕ್ಯೂ ನಿಲ್ಲಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರ ಮತ್ತು ಕೆಎಸ್‌ಸಿಎ ನಡುವಿನ ಒಪ್ಪಂದದಂತೆ ಪ್ರತಿ ಶಾಸಕರಿಗೆ ಮೂರು ಉಚಿತ ಟಿಕೆಟ್ ನೀಡಲಾಗುತ್ತಿದ್ದು, ಇದನ್ನು ಪಡೆಯಲು ಸ್ಪೀಕರ್ ಕಚೇರಿ ಮುಂದೆ ಪಿಎಗಳ ದಂಡೇ ನೆರೆದಿತ್ತು. ಜನರ ಸಾಲು ಸಾಲು ಸಮಸ್ಯೆಗಳನ್ನು ಬಗೆಹರಿಸುವ ಬದಲು, ಶಾಸಕರು ಐಪಿಎಲ್ ಟಿಕೆಟ್‌ಗಾಗಿ ಕ್ಯೂ ನಿಂತಿರುವುದು ಹಾಸ್ಯಾಸ್ಪದವಾಗಿ ಕಂಡರೂ, ಇದು ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಮತ್ತು ಟೀಕೆಗಳಿಗೆ ಗ್ರಾಸವಾಗಿದೆ.







Comments