;
top of page

IPL 19ನೇ ಆವೃತ್ತಿ ಫೈನಲ್: RCB vs GT — ಯಾರು ಕಪ್ ಗೆಲ್ಲುತ್ತಾರೆ? ರೋಚಕ ಕಾದಾಟಕ್ಕೆ ವೇದಿಕೆ ಸಜ್ಜು!

  • May 31
  • 1 min read

ಬೆಂಗಳೂರು/ಅಹಮದಾಬಾದ್, ಭಾನುವಾರ:

19ನೇ ಆವೃತ್ತಿಯ (IPL) ಚಾಂಪಿಯನ್ ಪಟ್ಟ ಯಾರಿಗೆ ಸಿಗಲಿದೆ ಎಂಬ ಕುತೂಹಲಕ್ಕೆ ಇಂದು ಅಂತಿಮ ಉತ್ತರ ಸಿಗಲಿದೆ. ಫೈನಲ್ ಪಂದ್ಯದಲ್ಲಿ (RCB) ಹಾಗೂ (GT) ತಂಡಗಳು ಮುಖಾಮುಖಿಯಾಗುತ್ತಿವೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇರುವುದರಿಂದ ಪ್ರಶಸ್ತಿ ಸುತ್ತಿನ ಕಾದಾಟ ತೀವ್ರ ಕುತೂಹಲ ಹುಟ್ಟಿಸಿದೆ.

ಈ ಸಲ IPL ಕಪ್ ಯಾರಿಗೆ?

  • 0%RCB

  • 0%GT


ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 92 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿ, ನೇರವಾಗಿ ಫೈನಲ್ ಪ್ರವೇಶಿಸಿತು. ಇನ್ನೊಂದೆಡೆ, ಮೊದಲ ಕ್ವಾಲಿಫೈಯರ್‌ನಲ್ಲಿ ಸೋಲು ಕಂಡ ಗುಜರಾತ್, ಎರಡನೇ ಕ್ವಾಲಿಫೈಯರ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದೆ.

ಸಂಘಟಿತ ಆಟವೇ RCB ಬಲ

ಈ ಸೀಸನ್‌ನಲ್ಲಿ ಆರ್‌ಸಿಬಿ ತಂಡ ಸಂಘಟಿತ ಆಟದ ಮೂಲಕ ಗಮನ ಸೆಳೆದಿದೆ. ಆರಂಭಿಕರಾಗಿ ಬೃಹತ್ ಇನ್ನಿಂಗ್ಸ್ ಕಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ರಜತ್ ಪಾಟಿದಾರ್, ಕೃನಾಲ್ ಪಾಂಡ್ಯ ಮುಂತಾದ ಆಟಗಾರರು ಮಧ್ಯಕ್ರಮದಲ್ಲಿ ಬಲ ತುಂಬುತ್ತಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಸ್ವಿಂಗ್ ಹಾಗೂ ಸೀಮ್ ಮೂಲಕ ಎದುರಾಳಿಗಳಿಗೆ ಸವಾಲು ಎಸೆಯಲಿದ್ದಾರೆ. ಜೊತೆಗೆ ಜೋಶ್ ಹ್ಯಾಜಲ್‌ವುಡ್‌, ಜಾಕೋಬ್ ಡಫಿ ತಂಡಕ್ಕೆ ಬಲ ನೀಡಿದ್ದಾರೆ.

ಗುಜರಾತ್‌ಗೆ ತವರಿನ ಬೆಂಬಲ

ಗುಜರಾತ್ ಟೈಟಾನ್ಸ್ ತಂಡ ತವರಿನ ಅಭಿಮಾನಿಗಳ ಮುಂದೆ ಫೈನಲ್ ಆಡುತ್ತಿದೆ. , ಸಾಯಿ ಸುದರ್ಶನ್‌, ಉತ್ತಮ ಫಾರ್ಮ್‌ನಲ್ಲಿ ಇದ್ದಾರೆ. ಬೌಲಿಂಗ್‌ನಲ್ಲಿ ಸ್ಪಿನ್ ಜಾದೂ ಹಾಗೂ ಕಗಿಸೋ ರಬಾಡ, ಮೊಹಮ್ಮದ್ ಸಿರಾಜ್ ವೇಗದ ದಾಳಿ ತಂಡದ ಬಲವಾಗಿದೆ.

ಇತಿಹಾಸ ನಿರ್ಮಾಣದ ಕ್ಷಣ

ಯಾವುದೇ ತಂಡ ಗೆದ್ದರೂ, ಎರಡನೇ ಬಾರಿ IPL ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸುವ ಅವಕಾಶ ಇದೆ. ಉಭಯ ತಂಡಗಳು ಈಗಾಗಲೇ ತಲಾ ಒಂದು ಬಾರಿ ಪ್ರಶಸ್ತಿ ಗೆದ್ದಿವೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page