ಐತಿಹಾಸಿಕ ತೀರ್ಪು: ಹರೀಶ್ ರಾಣಾಗೆ ಸುಪ್ರೀಂ ಕೋರ್ಟ್‌ನಿಂದ 'ಪರೋಕ್ಷ ದಯಾಮರಣ' ಅನುಮತಿ

13 ವರ್ಷಗಳಿಂದ ಕೋಮಾದಲ್ಲಿದ್ದ 32 ವರ್ಷದ ಹರೀಶ್ ರಾಣಾ ಅವರಿಗೆ ಗೌರವಯುತವಾಗಿ ಸಾಯಲು ಸುಪ್ರೀಂ ಕೋರ್ಟ್ ಐತಿಹಾಸಿಕ ಅನುಮತಿ ನೀಡಿದೆ. ಚೇತರಿಕೆಯ ಸಾಧ್ಯತೆಯಿಲ್ಲದ ಕಾರಣ, ಅವರಿಗೆ ನೀಡಲಾಗುತ್ತಿರುವ ಕೃತಕ ಆಹಾರ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಹಿಂಪಡೆಯಲು ನ್ಯಾಯಾಲಯವು ಹಸಿರು ನಿಶಾನೆ ತೋರಿಸಿದೆ.

ಈ ಹಿಂದೆ ಕೇವಲ ವೆಂಟಿಲೇಟರ್‌ಗಳಂತಹ ವ್ಯವಸ್ಥೆ ತೆಗೆಯಲು ಮಾತ್ರ ಅವಕಾಶವಿತ್ತು. ಆದರೆ, ಈ ತೀರ್ಪಿನ ಮೂಲಕ 'ಫೀಡಿಂಗ್ ಟ್ಯೂಬ್' ಮೂಲಕ ಜೀವ ಬೆಂಬಲ ಪಡೆಯುತ್ತಿರುವ ರೋಗಿಗಳಿಗೂ ದಯಾಮರಣ ಅನ್ವಯಿಸಬಹುದು ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಸ್ಪಷ್ಟಪಡಿಸಿದೆ.
ತಮ್ಮ ಮಗನ ನರಕಯಾತನೆಯನ್ನು ನೋಡಲಾಗದೆ ಪೋಷಕರು ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು. ಘನತೆಯಿಂದ ಸಾಯುವ ಹಕ್ಕನ್ನು ಎತ್ತಿ ಹಿಡಿದಿರುವ ಈ ತೀರ್ಪು, ದೇಶದ ನ್ಯಾಯಾಂಗ ಇತಿಹಾಸದಲ್ಲೇ ಕೋರ್ಟ್ ಆದೇಶದ ಮೂಲಕ ನೀಡಲಾದ ಮೊದಲ 'ಪರೋಕ್ಷ ದಯಾಮರಣ' (Passive Euthanasia) ಪ್ರಕರಣವಾಗಿದೆ.







Comments