ಧರ್ಮಸ್ಥಳ ನೂರಾರು ಶವ ಪತ್ತೆ ಪ್ರಕರಣ: ಎಸ್‌ಐಟಿ ಮತ್ತು ಎಫ್‌ಎಸ್‌ಎಲ್ ತಂಡದಿಂದ ಮರು ಮಹಜರು ಆರಂಭ

ದೇಶವನ್ನೇ ಬೆಚ್ಚಿಬೀಳಿಸಿದ್ದ ದಕ್ಷಿಣ ಕನ್ನಡದ ಧರ್ಮಸ್ಥಳ ಗ್ರಾಮದ ನೂರಾರು ಶವ ಹೂತಿಟ್ಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಬೆಂಗಳೂರಿನ ಎಫ್‌ಎಸ್‌ಎಲ್ ತಜ್ಞರು ಹಾಗೂ ಸೋಕೋ ತಂಡದೊಂದಿಗೆ ಎಸ್‌ಐಟಿ ಅಧಿಕಾರಿಗಳು ನೇತೃಾವತಿ ನದಿತೀರಕ್ಕೆ ಭೇಟಿ ನೀಡಿ ಮರು ಮಹಜರು ಆರಂಭಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ಏಳು ಶವಗಳ ಅವಶೇಷ ಪತ್ತೆಯಾಗಿದ್ದ ಬಂಗ್ಲೆಗುಡ್ಡೆ ಪರಿಸರದಲ್ಲಿ ತನಿಖೆ ತೀವ್ರಗೊಂಡಿದೆ. ತಲೆಬುರುಡೆ ಪತ್ತೆಯಾದ ಸ್ಥಳದ ವಿಡಿಯೋ ಚಿತ್ರೀಕರಿಸಿದ್ದ ಬಂಟ್ವಾಳದ ಪ್ರದೀಪ್ ಕುಲಾಲ್‌ನನ್ನು ಸ್ಥಳಕ್ಕೆ ಕರೆತಂದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಆರಂಭಿಕ ಮಹಜರು ಸಮರ್ಪಕವಾಗಿಲ್ಲದ ಕಾರಣ ಈ ಪ್ರಕ್ರಿಯೆ ನಡೆಯುತ್ತಿದ್ದು, ವಿಡಿಯೋದ ನೈಜತೆ ಹಾಗೂ ಘಟನಾ ಸ್ಥಳವನ್ನು ಖಚಿತಪಡಿಸಿಕೊಂಡು ಎಫ್‌ಎಸ್‌ಎಲ್ ಅಧಿಕಾರಿಗಳು ಶೀಘ್ರದಲ್ಲೇ ಎಸ್‌ಐಟಿಗೆ ವರದಿ ನೀಡಲಿದ್ದಾರೆ.







Comments