ಧರ್ಮಸ್ಥಳ ಅಸ್ಥಿಪಂಜರ ಪ್ರಕರಣ: ಮೂವರ ಡಿಎನ್ಎ ದೃಢ, ಮೂವರೂ ಪುರುಷರು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಎಸ್‌ಐಟಿ (SIT) ನಡೆಸಿದ ಉತ್ಖನನದ ವೇಳೆ ಪತ್ತೆಯಾಗಿದ್ದ ಅಸ್ಥಿಪಂಜರಗಳ ಪೈಕಿ ಮೂರು ಅಸ್ಥಿಪಂಜರಗಳ ಗುರುತು ಡಿಎನ್‌ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಜುಲೈ 15ರಂದು ಎಸ್‌ಐಟಿ ಸಲ್ಲಿಸಿದ್ದ ತನಿಖಾ ವರದಿಯಲ್ಲಿ ಈ ಡಿಎನ್‌ಎ ಫಲಿತಾಂಶದ ವಿವರಗಳನ್ನು ಉಲ್ಲೇಖಿಸಲಾಗಿದೆ.

ವಿಶೇಷವೆಂದರೆ, ಹತ್ಯೆಗೊಳಗಾದವರೆಲ್ಲರೂ ಮಹಿಳೆಯರು ಎಂಬ ಆರೋಪಗಳ ನಡುವೆ, ಪ್ರಸ್ತುತ ಪರೀಕ್ಷೆಯಿಂದ ಮೂವರೂ ಪುರುಷರು ಎಂಬುದು ದೃಢಪಟ್ಟಿದೆ. ಕೊಡಗಿನ ಯು.ಬಿ. ಅಯ್ಯಪ್ಪ (70), ತುಮಕೂರಿನ ಆದಿಶೇಷ (27) ಹಾಗೂ ಕೋಲಾರದ ಕೃಷ್ಣಪ್ಪ (85) ಅವರ ಕುಟುಂಬಸ್ಥರ ಡಿಎನ್‌ಎ ಮಾದರಿಗಳು ಈ ಅಸ್ಥಿಪಂಜರಗಳಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗಿವೆ.
ವಿವಿಧ ವರ್ಷಗಳಲ್ಲಿ ನಾಪತ್ತೆಯಾಗಿದ್ದ ಈ ಮೂವರೂ ಪುರುಷರಾಗಿದ್ದು, ಬಂಗ್ಲೆಗುಡ್ಡೆಯಲ್ಲಿ ಮಹಿಳೆಯರ ಹತ್ಯೆಯಾಗಿದೆ ಎಂಬ ವದಂತಿಗಳಿಗೆ ಈ ವರದಿ ತೆರೆ ಎಳೆದಿದೆ. ಕುಟುಂಬಸ್ಥರು ಸೂಕ್ತ ದಾಖಲೆಗಳೊಂದಿಗೆ ಎಸ್‌ಐಟಿಗೆ ಮನವಿ ಸಲ್ಲಿಸಿದರೆ, ಈ ಅಸ್ಥಿಪಂಜರಗಳನ್ನು ಅವರ ವಾರಸುದಾರರಿಗೆ ಹಸ್ತಾಂತರಿಸಲು ಅವಕಾಶ ನೀಡಲಾಗುವುದು.







Comments