ಹಸು ವಧೆ ನಿಷೇಧ: ಸುಪ್ರೀಂಗೆ ತಮಿಳುನಾಡು ಮೇಲ್ಮನವಿ
- Jul 2
- 1 min read

ಬಕ್ರೀದ್ ಸೇರಿದಂತೆ ಯಾವುದೇ ದಿನಗಳಲ್ಲಿ ಹಸು ಮತ್ತು ಕರುಗಳ ವಧೆ ಮಾಡಬಾರದು ಎಂಬ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಪಶುಸಂಗೋಪನೆ ಇಲಾಖೆ ಕಾರ್ಯದರ್ಶಿ ಮೂಲಕ ಈ ಅರ್ಜಿ ಸಲ್ಲಿಕೆಯಾಗಿದೆ.
ಕೊಯಂಬತ್ತೂರಿನಲ್ಲಿ ಬಕ್ರೀದ್ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಹಸು ವಧೆ ತಡೆಯುವ ಕುರಿತು ಮಾತ್ರ ಮೂಲ ಅರ್ಜಿ ಇತ್ತು. ಆದರೆ, ಹೈಕೋರ್ಟ್ ತನ್ನ ವ್ಯಾಪ್ತಿ ಮೀರಿ ರಾಜ್ಯದಾದ್ಯಂತ ಹಸು ವಧೆಗೆ ಸಂಪೂರ್ಣ ನಿಷೇಧ ಹೇರಿದೆ ಎಂದು ಸರ್ಕಾರ ವಾದಿಸಿದೆ.
ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆಗಳು ಹಸು ವಧೆಯನ್ನು ನಿಯಂತ್ರಿಸುತ್ತವೆಯೇ ಹೊರತು ಪೂರ್ಣ ನಿಷೇಧಿಸುವುದಿಲ್ಲ. ಧಾರ್ಮಿಕ ವಿಷಯಗಳ ಚರ್ಚೆ ಅನಗತ್ಯವಾಗಿದ್ದು, ಹೈಕೋರ್ಟ್ ತೀರ್ಪಿಗೆ ತಡೆ ನೀಡಬೇಕೆಂದು ವಕೀಲ ಜಯಶ್ರೀ ನರಸಿಂಹನ್ ಸಲ್ಲಿಸಿದ ಅರ್ಜಿಯಲ್ಲಿ ಕೋರಲಾಗಿದೆ.







Comments