ಮಾನಸಿಕ ಖಿನ್ನತೆಯಿಂದ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆ ಪೂರ್ಣ
- Apr 10
- 1 min read

ಕಾನ್ಸಿಡೆಂಟ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ಪೂರ್ಣಗೊಳಿಸಿದೆ. ತನಿಖೆಯ ವರದಿಯ ಪ್ರಕಾರ, ರಾಯ್ ಅವರು ತೀವ್ರ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ತೀರ್ಮಾನಕ್ಕೆ ಬರಲಾಗಿದೆ. ಈ ಸಾವಿನ ಹಿಂದೆ ಯಾವುದೇ ಬಾಹ್ಯ ಒತ್ತಡ ಅಥವಾ ಪ್ರಚೋದನೆಗಳು ಕಂಡುಬಂದಿಲ್ಲ ಎಂದು ಎಸ್‌ಐಟಿ ಸ್ಪಷ್ಟಪಡಿಸಿದೆ.

ಖಿನ್ನತೆಗೆ ನಿಖರವಾದ ಕಾರಣಗಳು ಪತ್ತೆಯಾಗದಿದ್ದರೂ, ಸುದೀರ್ಘ ವಿಚಾರಣೆಯ ನಂತರ ಎಸ್‌ಐಟಿ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಅಂತಿಮ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಿದೆ. ತನಿಖೆಯ ಸಂದರ್ಭದಲ್ಲಿ ಹಲವು ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಪ್ರಕರಣದಲ್ಲಿ ಯಾವುದೇ ಸಂಚು ಇಲ್ಲದಿರುವುದು ದೃಢಪಟ್ಟಿದೆ. ಇದರೊಂದಿಗೆ ಸಿಜೆ ರಾಯ್ ಸಾವಿನ ಸುತ್ತುವರಿದಿದ್ದ ಹಲವು ತಿಂಗಳುಗಳ ಕುತೂಹಲಕ್ಕೆ ಮತ್ತು ಅನುಮಾನಗಳಿಗೆ ತೆರೆ ಬಿದ್ದಂತಾಗಿದೆ.







Comments