ಸರಗಳ್ಳತನಕ್ಕೆ ಮುಂದಾದ ಖದೀಮ: ಕೈಕೊಟ್ಟ ಬೈಕ್, ಸಾರ್ವಜನಿಕರಿಂದ ಧರ್ಮದೇಟು!

ಶ್ರೀಲಂಕಾದ ವೆಣ್ಣಪ್ಪುವಾದಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಯೊಬ್ಬ ಆಕೆಯ ಚಿನ್ನದ ಸರವನ್ನು ಕಸಿದು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ಕೆಳಕ್ಕೆ ಬಿದ್ದಿದ್ದು, ಆರೋಪಿ ಆಕೆಯ ಕುತ್ತಿಗೆಯಲ್ಲಿದ್ದ ಸರವನ್ನು ಬಲವಂತವಾಗಿ ಕಿತ್ತುಕೊಂಡಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಸರ ಕಸಿದು ಎಸ್ಕೇಪ್ ಆಗುವ ಸಂಭ್ರಮದಲ್ಲಿದ್ದ ಕಳ್ಳನಿಗೆ ಆತನ ಬೈಕ್ ಕೈಕೊಟ್ಟಿದೆ. ಬೈಕ್ ಸ್ಟಾರ್ಟ್ ಆಗದ ಕಾರಣ ಸ್ಥಳದಲ್ಲಿದ್ದ ಜನರು ಆತನನ್ನು ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕಳ್ಳನ ದುರದೃಷ್ಟ ಮತ್ತು ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಯುವತಿಯ ಸರ ವಾಪಸ್ ಸಿಕ್ಕಂತಾಗಿದೆ.







Comments