ಸಿಇಟಿ ಫಲಿತಾಂಶ: ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ರ‍್ಯಾಂಕ್‌ಗಳ ಸುರಿಮಳೆ
- Jun 6
- 1 min read

ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಎಂಜಿನಿಯರಿಂಗ್ ವಿಭಾಗದ ಮೊದಲ 10 ರ‍್ಯಾಂಕ್‌ಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಭರ್ಜರಿ ನಾಲ್ಕು ರ‍್ಯಾಂಕ್‌ಗಳನ್ನು ಮುಡಿಗೇರಿಸಿಕೊಂಡಿದೆ. ಮಂಗಳೂರಿನ 'ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜು' ಮೂರು ರ‍್ಯಾಂಕ್‌ಗಳನ್ನು ಬಾಚಿಕೊಂಡರೆ, ಬೆಳ್ತಂಗಡಿಯ 'ವಿದ್ವತ್ ಪಿಯು ಕಾಲೇಜು' ಒಂದು ರ‍್ಯಾಂಕ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದೆ.
ದಿ ಲರ್ನಿಂಗ್ ಸೆಂಟರ್‌ನ ಇರಾ ಜೈನ್ 4ನೇ ರ‍್ಯಾಂಕ್, ರಿಶೊನ್ ಫೆರ್ನಾಂಡಿಸ್ 5ನೇ ರ‍್ಯಾಂಕ್ ಹಾಗೂ ಅಭಿ ಸಣ್ಣಯ್ಯ 8ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ವಿದ್ವತ್ ಕಾಲೇಜಿನ ಚಿನ್ಮಯ್ ಜಿ.ಕೆ 7ನೇ ರ‍್ಯಾಂಕ್ ಪಡೆದಿದ್ದಾರೆ. ಇನ್ನು ಕೃಷಿ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನ ಸಮಯ್ ಎ.ಎಸ್ 3ನೇ ಹಾಗೂ ರಿಷಿಕಾ ಕೆ.ಎಸ್ 4ನೇ ರ‍್ಯಾಂಕ್ ಪಡೆದರೆ, ಶಾರದಾ ಕಾಲೇಜಿನ ಶ್ರೇಯಾ ಬಲ್ಲಾಳ್ 9ನೇ ರ‍್ಯಾಂಕ್ ಗಳಿಸಿದ್ದಾರೆ.
ಇದಲ್ಲದೆ, ನರ್ಸಿಂಗ್ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳಲ್ಲೂ ಜಿಲ್ಲೆಯ ವಿದ್ಯಾರ್ಥಿಗಳು ಮಿಂಚಿದ್ದಾರೆ. ಎಕ್ಸ್‌ಪರ್ಟ್ ಕಾಲೇಜಿನ ರಿಷಭ್ ಶೆಟ್ಟಿ ಬಿಎಸ್‌ಸಿ ನರ್ಸಿಂಗ್‌ನಲ್ಲಿ 8ನೇ ರ‍್ಯಾಂಕ್ ಮತ್ತು ದೀಕ್ಷಾ ಶೆಣೈ ಯೋಗ ಮತ್ತು ನ್ಯಾಚುರೊಪತಿಯಲ್ಲಿ 6ನೇ ರ‍್ಯಾಂಕ್ ಪಡೆದಿದ್ದಾರೆ. ಇತ್ತ ರಿಶೋನ್ ಫೆರ್ನಾಂಡಿಸ್ ಬಿ.ಫಾರ್ಮ ಮತ್ತು ಡಿ.ಫಾರ್ಮ ವಿಭಾಗದಲ್ಲೂ 10ನೇ ರ‍್ಯಾಂಕ್ ಗಳಿಸಿ ದ್ವಿಗುಣ ಸಾಧನೆ ಮಾಡಿದ್ದಾರೆ.







Comments