ಮಗಳು ಕ್ಯಾಂಡಿ ಕದ್ದಿದ್ದಕ್ಕೆ ಮಗಳ ಪ್ರಾಣವನ್ನೇ ತೆಗೆದ ಕ್ರೂರಿ ತಂದೆ

ಉತ್ತರ ಪ್ರದೇಶದ ರತನ್‌ಪುರದಲ್ಲಿ ತಂದೆಯೊಬ್ಬ ತನ್ನ 12 ವರ್ಷದ ಮಗಳನ್ನು ಕ್ಷುಲ್ಲಕ ಕಾರಣಕ್ಕಾಗಿ ಕೋಲಿನಿಂದ ಹೊಡೆದು ಕೊಂದಿರುವ ದಾರುಣ ಘಟನೆ ನಡೆದಿದೆ. ಅಂಗಡಿಯೊಂದರಲ್ಲಿ ಬಾಲಕಿ ಕ್ಯಾಂಡಿ ಕದ್ದಿದ್ದಾಳೆಂದು ಮಾಲೀಕರು ದೂರು ನೀಡಿದ್ದರಿಂದ ಕೋಪಗೊಂಡ ತಂದೆ ಪುಷ್ಪೇಂದ್ರ ಅಲಿಯಾಸ್ ಪಪ್ಪು ಶರ್ಮಾ, ಮನೆಗೆ ಬರುತ್ತಿದ್ದಂತೆ ಮಗಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಪ್ರಾಣ ತೆಗೆದಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ತಾಯಿ ಆರತಿ ನೀಡಿದ ದೂರಿನ ಮೇರೆಗೆ ನರೋರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಾರ್ಚ್ 29 ರಂದು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕೋಲನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಯು ಪೊಲೀಸ್ ವಶದಲ್ಲಿದ್ದು, ತನಿಖೆ ಮುಂದುವರಿದಿದೆ.







Comments