ಬಸ್ ಕಿಟಕಿಯಿಂದ ಹೊರಗೆ ತಲೆ ಹಾಕಿ ಗುಟ್ಕಾ ಉಗಿಯಲು ಹೋಗಿ ವಿದ್ಯಾರ್ಥಿ ದುರ್ಮರಣ!

ಧಾರವಾಡದಲ್ಲಿ ಕರುಳು ಹಿಂಡುವ ಘಟನೆಯೊಂದು ನಡೆದಿದ್ದು, ಚಲಿಸುವ ಬಸ್ ಕಿಟಕಿಯಿಂದ ಹೊರಗೆ ತಲೆ ಹಾಕಿ ಗುಟ್ಕಾ ಉಗಿಯಲು ಯತ್ನಿಸಿದ ೧೭ ವರ್ಷದ ಐಟಿಐ ವಿದ್ಯಾರ್ಥಿ ಪಕ್ಕಿರೇಶ್ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ವಿದ್ಯಾರ್ಥಿ ತಲೆ ಹೊರಹಾಕಿದಾಗ ಹಿಂಬದಿಯಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಆತನ ತಲೆಗೆ ಬಲವಾಗಿ ಡಿಕ್ಕಿ ಹೊಡೆದಿದ್ದು, ತಲೆ ದೇಹದಿಂದ ಬೇರ್ಪಟ್ಟು ರಸ್ತೆಗೆ ಬಿದ್ದಿದೆ.
ಅಪಾಯದ ಮುನ್ಸೂಚನೆ ಇದ್ದರೂ ಮಾಡುವ ಇಂತಹ ದುಸ್ಸಾಹಸಗಳು ತಂದಿಡುವ ಆಪತ್ತಿಗೆ ಈ ಘಟನೆ ಸಾಕ್ಷಿಯಾಗಿದೆ. ಸಹಪ್ರಯಾಣಿಕರನ್ನು ಬೆಚ್ಚಿಬೀಳಿಸಿರುವ ಈ ಘಟನೆ ಕುರಿತು ಟಿಪ್ಪರ್ ಚಾಲಕನ ವಿರುದ್ಧ ಸದ್ಯ ಪ್ರಕರಣ ದಾಖಲಾಗಿದೆ.







Comments