ಸಿದ್ದರಾಮಯ್ಯ 'ಬಜೆಟ್' ಅಬ್ಬರ: 83 ಲಕ್ಷ ರೈತರಿಗೆ ಸಾಲದ ಆಸರೆ, ಶಿಕ್ಷಣಕ್ಕೆ ದಾಖಲೆ ಅನುದಾನ!
- Mar 6
- 1 min read

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿ ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸಿದರು. ಸಚಿವ ಸಂಪುಟದ ಅನುಮೋದನೆ ಪಡೆದ ಬಳಿಕ ಕೆಂಪು ಸೂಟ್‌ಕೇಸ್‌ನೊಂದಿಗೆ ಆಗಮಿಸಿದ ಸಿಎಂ, ರಾಜ್ಯದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯೊಂದಿಗೆ ಭಾಷಣ ಆರಂಭಿಸಿದರು. ಈ ಬಜೆಟ್‌ನಲ್ಲಿ ಸಮಾಜದ ವಿವಿಧ ವರ್ಗಗಳಿಗೆ ಭರಪೂರ ಅನುದಾನ ಘೋಷಿಸಲಾಗಿದೆ.
ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಿಂಹಪಾಲು ನೀಡಲಾಗಿದ್ದು, ದಾಖಲೆಯ 47,224 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 34,929 ಕೋಟಿ ಹಾಗೂ ನಗರಾಭಿವೃದ್ಧಿಗೆ 22,203 ಕೋಟಿ ರೂಪಾಯಿ ನೀಡಲಾಗಿದೆ. ಇದು ರಾಜ್ಯದ ಮೂಲಸೌಕರ್ಯ ಮತ್ತು ಸಾಮಾಜಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡುವ ಸೂಚನೆಯಾಗಿದೆ.
ವಿಶೇಷವಾಗಿ ರೈತರಿಗೆ ಈ ಬಜೆಟ್ ಬಂಪರ್ ಕೊಡುಗೆ ನೀಡಿದೆ. ಸುಮಾರು 83 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 70 ಸಾವಿರ ಕೋಟಿ ರೂಪಾಯಿ ಕೃಷಿ ಸಾಲ ನೀಡುವ ಮಹತ್ವದ ಯೋಜನೆಯನ್ನು ಸಿಎಂ ಪ್ರಕಟಿಸಿದ್ದಾರೆ. ಈ ಕ್ರಮವು ಕೃಷಿ ವಲಯದ ಆರ್ಥಿಕ ಚೇತರಿಕೆಗೆ ದೊಡ್ಡ ಶಕ್ತಿ ತುಂಬಲಿದೆ.







Comments