ಇಂಧನ ಅಭಾವದ ವದಂತಿ: ಭಟ್ಕಳದಲ್ಲಿ ಪೆಟ್ರೋಲ್‌ಗಾಗಿ ಮುಗಿಬಿದ್ದ ಜನ

ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಉದ್ವಿಗ್ನತೆಯಿಂದಾಗಿ ಜಾಗತಿಕವಾಗಿ ತೈಲ ಬೆಲೆ ಏರಿಕೆಯ ಭೀತಿ ಎದುರಾಗಿದೆ. ಇರಾನ್ ಹಾರ್ಮೂಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ನಿರ್ಬಂಧ ಹೇರಿರುವುದು ಇಂಧನ ಕೊರತೆಯ ಆತಂಕವನ್ನು ಹೆಚ್ಚಿಸಿದೆ. ಇದರ ಬೆನ್ನಲ್ಲೇ ತೈಲ ದರ ಬ್ಯಾರೆಲ್‌ಗೆ 100 ಡಾಲರ್ ತಲುಪಿರುವುದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಇಂಧನ ಬೆಲೆ ದುಪ್ಪಟ್ಟಾಗಲಿದೆ ಎಂಬ ತಪ್ಪು ಮಾಹಿತಿ ಹರಡಿದ್ದರಿಂದ, ಉತ್ತರ ಕನ್ನಡದ ಭಟ್ಕಳದಲ್ಲಿ ಪೆಟ್ರೋಲ್ ಪಡೆಯಲು ಜನ ಮುಗಿಬಿದ್ದಿದ್ದಾರೆ. ಬಂಕ್‌ಗಳಲ್ಲಿ ವಾಹನಗಳ ಸಾಲು ಕಂಡುಬಂದಿದ್ದು, ಅನೇಕರು ಮುನ್ನೆಚ್ಚರಿಕೆಯಾಗಿ ಕ್ಯಾನ್‌ಗಳಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದಾರೆ. ಈ ವದಂತಿಗಳಿಂದಾಗಿ ಸ್ಥಳೀಯವಾಗಿ ಕೃತಕ ಅಭಾವದ ಪರಿಸ್ಥಿತಿ ನಿರ್ಮಾಣವಾಗಿದೆ.
ಭಟ್ಕಳದಲ್ಲಿ ಪೆಟ್ರೋಲ್ ಸಿಗದ ಕಾರಣ ಕೆಲವರು ನೆರೆಯ ಹೊನ್ನಾವರ ಮತ್ತು ಕುಂದಾಪುರ ಭಾಗದ ಬಂಕ್‌ಗಳತ್ತ ಧಾವಿಸುತ್ತಿದ್ದಾರೆ. ಯುದ್ಧದ ಭೀತಿ ಮತ್ತು ಸುಳ್ಳು ಸುದ್ದಿಗಳು ಜನರನ್ನು ಆತಂಕಕ್ಕೆ ತಳ್ಳಿದ್ದು, ಇಂಧನ ಸಂಗ್ರಹಣೆಗಾಗಿ ಜನಸಾಮಾನ್ಯರು ಹರಸಾಹಸ ಪಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದಂತೆ ಸ್ಥಳೀಯರು ಮನವಿ ಮಾಡಿದ್ದಾರೆ.







Comments