ಬೆಂಜನಪದವು ಕೊರಗಜ್ಜ ಸನ್ನಿಧಿಗೆ ನಟಿ ರಚಿತಾ ರಾಮ್ ಭೇಟಿ: ಹರಕೆ ಕೋಲ ಸೇವೆ ಸಲ್ಲಿಕೆ

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ರಚಿತಾ ರಾಮ್ ಅವರು ತುಳುನಾಡಿನ ಆರಾಧ್ಯ ದೈವ ಸ್ವಾಮಿ ಕೊರಗಜ್ಜನಿಗೆ ಹರಕೆ ಕೋಲ ಸೇವೆ ಸಲ್ಲಿಸಿದ್ದಾರೆ. ಬಂಟ್ವಾಳ ತಾಲೂಕಿನ ಪ್ರಸಿದ್ಧ ಬೆಂಜನಪದವಿನ ಕೊರಗಜ್ಜ ಸನ್ನಿಧಿಗೆ ಭೇಟಿ ನೀಡಿದ ನಟಿಯು, ದೈವದ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ತಾನು ಅಂದುಕೊಂಡ ಕಾರ್ಯಗಳು ಹಾಗೂ ಸಿನೆಮಾ ರಂಗದ ಯಶಸ್ಸಿಗಾಗಿ ಕೊರಗಜ್ಜ ದೈವಕ್ಕೆ ಕೋಲ ಸೇವೆ ಸಲ್ಲಿಸುವುದಾಗಿ ರಚಿತಾ ರಾಮ್ ಈ ಹಿಂದೆ ಹರಕೆ ಹೊತ್ತಿದ್ದರು. ತಮ್ಮ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ, ಸನ್ನಿಧಿಗೆ ಆಗಮಿಸಿ ಅತ್ಯಂತ ಭಕ್ತಿ-ಭಾವದಿಂದ ಹರಕೆಯನ್ನು ಪೂರ್ಣಗೊಳಿಸಿದ್ದಾರೆ.
ಸ್ಯಾಂಡಲ್‌ವುಡ್‌ನ ಬಹುತೇಕ ಎಲ್ಲ ಸೂಪರ್‌ಸ್ಟಾರ್ ನಟರ ಜೊತೆ ನಟಿಸಿರುವ ರಚಿತಾ ರಾಮ್, ಸದ್ಯ ಧ್ರುವ ಸರ್ಜಾ ನಟನೆಯ 'ಕ್ರಿಮಿನಲ್' ಹಾಗೂ 'ಅಯೋಗ್ಯ 2' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಹೊಸ ಸಿನಿಮಾಗಳ ಮಾತುಕತೆ ನಡೆಯುತ್ತಿದೆ.







Comments