ಅರಬ್ಬೀ ಸಮುದ್ರದಲ್ಲಿ ಸಂಕಷ್ಟದಲ್ಲಿದ್ದ ಭಾರತೀಯ ಹಡಗಿನ ರಕ್ಷಣೆ: ಮಾನವೀಯತೆ ಮೆರೆದ ಪಾಕಿಸ್ತಾನ ನೌಕಾಪಡೆ

ಅರಬ್ಬೀ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಹಡಗನ್ನು ಪಾಕಿಸ್ತಾನದ ನೌಕಾಪಡೆ ರಕ್ಷಿಸಿ ಮಾನವೀಯತೆ ಮೆರೆದಿದೆ. ಒಮಾನ್‌ನಿಂದ ಭಾರತಕ್ಕೆ ಹಿಂದಿರುಗುತ್ತಿದ್ದ 'ಎಂವಿ ಗೌತಮ್' ಹೆಸರಿನ ಈ ಹಡಗು ಸಮುದ್ರದ ಮಧ್ಯದಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಹಡಗಿನಲ್ಲಿದ್ದ ಸಿಬ್ಬಂದಿ ತುರ್ತು ನೆರವಿಗಾಗಿ ಮನವಿ ಮಾಡಿದ್ದರು.
ಮುಂಬೈನ ಸಾಗರ ರಕ್ಷಣಾ ಮತ್ತು ಸಮನ್ವಯ ಕೇಂದ್ರವು ತಕ್ಷಣವೇ ಪಾಕಿಸ್ತಾನದ ಅಧಿಕಾರಿಗಳನ್ನು ಸಂಪರ್ಕಿಸಿ ಸಹಾಯ ಕೋರಿತು. ಭಾರತದ ಮನವಿಗೆ ತ್ವರಿತವಾಗಿ ಸ್ಪಂದಿಸಿದ ಪಾಕಿಸ್ತಾನ ನೌಕಾಪಡೆಯು 'ಪಿಎಂಎಸ್ಎಸ್ ಕಾಶ್ಮೀರ್' ಎಂಬ ಯುದ್ಧನೌಕೆಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿತು. ಈ ಕಾರ್ಯಾಚರಣೆಯು ಯಶಸ್ವಿಯಾಗಿ ನಡೆದಿದ್ದು, ಸಿಬ್ಬಂದಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಯಿತು.

ಹಡಗಿನಲ್ಲಿದ್ದ ಆರು ಮಂದಿ ಭಾರತೀಯರು ಹಾಗೂ ಒಬ್ಬ ಇಂಡೋನೇಷ್ಯಾದ ಪ್ರಜೆಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಸಂಕಷ್ಟದಲ್ಲಿದ್ದ ನಾವಿಕರಿಗೆ ಪಾಕಿಸ್ತಾನಿ ನೌಕಾಪಡೆಯು ಆಹಾರ, ನೀರು ಮತ್ತು ತಾಂತ್ರಿಕ ನೆರವನ್ನು ನೀಡಿದೆ. ಸಮುದ್ರದಲ್ಲಿನ ತುರ್ತು ಸಂದರ್ಭಗಳಲ್ಲಿ ದೇಶಗಳ ನಡುವಿನ ಸಹಕಾರಕ್ಕೆ ಈ ಘಟನೆ ಸಾಕ್ಷಿಯಾಗಿದೆ.







Comments