ಅಣ್ಣಾಮಲೈ ಮನವೊಲಿಸಿದ ಅಮಿತ್ ಶಾ: ತಮಿಳುನಾಡು ಬಿಜೆಪಿಯಲ್ಲಿ ಬದಲಾವಣೆಯ ಗಾಳಿ!

ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಘಟನೆ ತೀವ್ರ ಸಂಚಲನ ಮೂಡಿಸಿದೆ. ಅವರು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಅಲ್ಲದೆ, ಬಿಜೆಪಿಯಿಂದ ಹೊರಬಂದು 'ಮಕ್ಕಳ್ ಶಕ್ತಿ ಇಯಕ್ಕಂ' ಹೆಸರಿನ ಸ್ವತಂತ್ರ ಸಂಘಟನೆ ಆರಂಭಿಸಲು ನಿರ್ಧರಿಸಿದ್ದರು ಎಂದು ವರದಿಯಾಗಿತ್ತು.
ಆದರೆ, ಈ ರಾಜಕೀಯ ಹೈಡ್ರಾಮಾಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿ ಕೊಟ್ಟ ಬೆನ್ನಲ್ಲೇ ಕಥೆ ಸಂಪೂರ್ಣ ಉಲ್ಟಾ ಆಗಿದೆ. ಅಣ್ಣಾಮಲೈ ಅವರೊಂದಿಗೆ ಗಹನವಾದ ಚರ್ಚೆ ನಡೆಸಿದ ಅಮಿತ್ ಶಾ, ಅವರ ಅಸಮಾಧಾನವನ್ನು ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವರಿಷ್ಠರ ಮನವೊಲಿಕೆಗೆ ಮಣಿದಿರುವ ಅಣ್ಣಾಮಲೈ ತಮ್ಮ ರಾಜೀನಾಮೆ ನಿರ್ಧಾರವನ್ನು ಸದ್ಯಕ್ಕೆ ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.
ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ತಮಿಳುನಾಡಿನ ಪ್ರಸ್ತುತ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್‌ಗೆ ತುರ್ತು ಸಮನ್ಸ್ ಜಾರಿಗೊಳಿಸಿ ದೆಹಲಿಗೆ ಕರೆಸಿಕೊಂಡಿದೆ. ಈ ಹಠಾತ್ ಸಭೆಗಳು ದ್ರಾವಿಡ ನಾಡಿನಲ್ಲಿ ಬಿಜೆಪಿಯ ಆಂತರಿಕ ಬಣ ರಾಜಕೀಯ ಮತ್ತು ಮುಂಬರುವ ರಣತಂತ್ರದಲ್ಲಿ ಭಾರಿ ಬದಲಾವಣೆಯ ಮುನ್ಸೂಚನೆ ನೀಡಿವೆ.







Comments