top of page
News Articles
Sathyapatha News Plus


ಉಪ್ಪಿನಂಗಡಿ: ಅಡಿಕೆ ಬೆಳೆಗಾರರಿಗೆ ವಿಮಾ ಪರಿಹಾರದಲ್ಲಿ ಅನ್ಯಾಯ
ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಕೃಷಿಕರಿಗೆ ಬಿಡುಗಡೆಯಾಗಿರುವ ಪರಿಹಾರ ಮೊತ್ತವು ಅನ್ಯಾಯದಿಂದ ಕೂಡಿದೆ. ಕೃಷಿಕರು ಮತ್ತು ಸರ್ಕಾರದಿಂದ ಒಟ್ಟು ಪಾವತಿಯಾದ ವಿಮಾ ಕಂತಿಗೆ ಹೋಲಿಸಿದರೆ ಪರಿಹಾರ ಮೊತ್ತವು ಬಹಳ ಕಡಿಮೆಯಾಗಿದ್ದು, ಈ ಅನ್ಯಾಯವನ್ನು ಸರಿಪಡಿಸಲು ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಪುತ್ತೂರು ಸಹಾಯಕ ಕಮಿಷನರ್ ಅವರಿಗೆ ಮನವಿ ಸಲ್ಲಿಸಲಾಯಿತು. ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಸುನೀಲ್ ಕುಮಾರ್ ದಡ್ಡು ಅವರು ಈ ಸಂದರ್ಭದಲ್ಲಿ ಮಾತನಾಡಿ, ಅಡಿಕೆ ಕೃಷಿಕರ ಬೆಳೆ
Dec 121 min read


ಭಾರಿ ಏರಿಕೆ ಕಂಡ ಚಿನ್ನದ ದರ
ಇಂದು, ಡಿಸೆಂಬರ್ 12, 2025 ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಏರಿದೆ; 24 ಕ್ಯಾರೆಟ್ ಚಿನ್ನದ ದರ 13,266 ರೂ/ಗ್ರಾಂ ಮತ್ತು 22 ಕ್ಯಾರೆಟ್ ಚಿನ್ನದ ದರ 12,160 ರೂ/ಗ್ರಾಂ ತಲುಪಿದೆ, ಬೆಳ್ಳಿಯ ದರ ಕೂಡ 204 ರೂ/ಗ್ರಾಂಗೆ ಹೆಚ್ಚಾಗಿದೆ. ಇಂದಿನ ಚಿನ್ನದ ದರ (ಬೆಂಗಳೂರು, 12-12-2025): 24 ಕ್ಯಾರೆಟ್ ಚಿನ್ನ: 13,266 ರೂ (1 ಗ್ರಾಂ). 22 ಕ್ಯಾರೆಟ್ ಚಿನ್ನ: 12,160 ರೂ (1 ಗ್ರಾಂ). ಬೆಳ್ಳಿ: 204 ರೂ (1 ಗ್ರಾಂ).
Dec 121 min read


ಸಾಮಾಜಿಕ ಬಹಿಷ್ಕಾರ ನಿಷೇಧಕ್ಕೆ ಕರ್ನಾಟಕದಲ್ಲಿ ಕಠಿಣ ಕಾನೂನು
ಕರ್ನಾಟಕ ಸರ್ಕಾರವು ವಿಧಾನಸಭೆಯಲ್ಲಿ ಇಂದು ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆಯನ್ನು ಮಂಡಿಸುವ ಮೂಲಕ ಮಹತ್ವದ ಐತಿಹಾಸಿಕ ಹೆಜ್ಜೆಯಿಟ್ಟಿದೆ. ಈ ಮಸೂದೆಯ ಮುಖ್ಯ ಉದ್ದೇಶವು ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿದೆ. ಈ ಹೊಸ ಕಾನೂನಿನ ಅನ್ವಯ, ಯಾರಾದರೂ ಸಾಮಾಜಿಕ ಬಹಿಷ್ಕಾರದಂತಹ ಕೃತ್ಯಕ್ಕೆ ಮುಂದಾದರೆ, ಅವರಿಗೆ 1 ಲಕ್ಷ ರೂ.ಗಳ ದಂಡ ಹಾಗೂ 3 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಬಹಿಷ್ಕಾರ ಹಾಕಲು ಸಭೆ-ಪಂಚಾಯಿತಿ ನಡೆಸುವುದು, ಅದಕ್ಕೆ
Dec 121 min read


ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ
ಮಹಾರಾಷ್ಟ್ರದ ಲಾತೂರ್ನಲ್ಲಿ ತಮ್ಮ ನಿವಾಸದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ (91) ಅವರು ಶುಕ್ರವಾರ ಬೆಳಗ್ಗೆ 6.30ಕ್ಕೆ ಕೊನೆಯುಸಿರೆಳೆದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಪಾಟೀಲ್ ಅವರು ತೀವ್ರ ಅನಾರೋಗ್ಯದಿಂದಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಪಾಟೀಲ್ ಅವರ ನಿಧನದಿಂದಾಗಿ ದೇಶದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಶೂನ್ಯತೆ ಉಂಟಾದಂತಾಗಿದೆ. ರಾಜಕೀಯದಲ್ಲಿ ಸುದೀರ್ಘ ಅನುಭವ ಹೊಂದಿದ್ದ ಶಿವರಾಜ್ ಪಾಟೀಲ್ ಅವರು 1980
Dec 121 min read


ಮೈಸೂರು ಅರಮನೆ ವರಾಹ ಗೇಟ್ ಬಳಿ ಮುಖ್ಯದ್ವಾರದ ಚಾವಣಿ ಕುಸಿತ: ಭಾರೀ ಅನಾಹುತದಿಂದ ಪಾರಾದ ಸಾರ್ವಜನಿಕರು
ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯ ಮುಖ್ಯ ಪ್ರವೇಶ ದ್ವಾರವಾದ ವರಾಹ ಗೇಟ್ನ (Varaha Gate) ಮೇಲ್ಪಾವಣೆಯ ಸಣ್ಣ ಭಾಗವೊಂದು ದಿಢೀರ್ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಪ್ರವಾಸಿಗರು ಮತ್ತು ಸಾರ್ವಜನಿಕರು ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆ ನಡೆದ ಸಂದರ್ಭದಲ್ಲಿ ದ್ವಾರದ ಬಳಿ ಯಾರು ಇಲ್ಲದ ಕಾರಣ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಐತಿಹಾಸಿಕ ಕಟ್ಟಡದ ಭಾಗ ಕುಸಿದಿರುವ ಈ ಘಟನೆಯು ಅರಮನೆಯ ಸಂರಕ್ಷಣೆ ಮತ್ತು ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕುಸಿದು ಬಿದ್ದಿರುವುದು ಗೇಟಿನ ಮೇಲ್ಭಾಗದ ಸಣ್ಣ ಪ್ರಮಾಣದ ಚಾವಣಿಯಾಗಿದೆ. ಈ ಘಟನೆ
Dec 111 min read


ಜೈಲಿನಲ್ಲಿದ್ದರೂ ದರ್ಶನ್ 'ಡೆವಿಲ್' ಸಿನಿಮಾಕ್ಕೆ ಭರ್ಜರಿ ಓಪನಿಂಗ್: ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ
ಚಿತ್ರದುರ್ಗದ ನಿವಾಸಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಬಳ್ಳಾರಿ ಜೈಲಿನಿಂದಲೇ ತಮ್ಮ ಅಭಿಮಾನಿಗಳಿಗೆ ಸಂದೇಶ ಕಳುಹಿಸಿ, ತಾವು ನಟಿಸಿರುವ ಬಹುನಿರೀಕ್ಷಿತ 'ಡೆವಿಲ್' ಚಿತ್ರವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿಕೊಂಡಿದ್ದರು. ಅವರ ಮನವಿಗೆ ಸ್ಪಂದಿಸಿದ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಚಿತ್ರಮಂದಿರಗಳತ್ತ ದೌಡಾಯಿಸಿದ್ದಾರೆ. ಬುಧವಾರ (ಡಿಸೆಂಬರ್ 10) ಬಿಡುಗಡೆಯಾದ ಈ ಚಿತ್ರಕ್ಕೆ ದರ್ಶನ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 6.30 ರಿಂದಲೇ ಪ್ರದರ್ಶನಗಳು ಪ್
Dec 111 min read


ಮೆಕ್ಸಿಕೋದಿಂದ ಭಾರತದ ಉತ್ಪನ್ನಗಳಿಗೆ ಶೇ. 50ರಷ್ಟು ಸುಂಕ
ಅಮೆರಿಕಾದ ಸುಂಕ ಸಮರದ ಬೆನ್ನಲ್ಲೇ ಈಗ ಮೆಕ್ಸಿಕೋ ಕೂಡ ಏಷ್ಯಾದ ದೇಶಗಳಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಲು ಮುಂದಾಗಿದೆ. ಮೆಕ್ಸಿಕೋದ ಅಧ್ಯಕ್ಷೆ ಕ್ಲೌಡಿಯಾ ಶೀನ್ಬಾಮ್ ಅವರು ಸ್ಥಳೀಯ ಉದ್ಯಮಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ. 2026ರ ಜನವರಿಯಿಂದ ಜಾರಿಗೆ ಬರಲಿರುವ ಈ ಸುಂಕ ವಿಧಿಸುವ ಮಸೂದೆಗೆ ಮೆಕ್ಸಿಕನ್ ಸೆನೆಟ್ (ಮೇಲ್ಮನೆ) ಅಂತಿಮ ಅನುಮೋದನೆ ನೀಡಿದೆ. ಈ ನಿರ್ಣಯದ ಪರವಾಗಿ 76 ಮತ್ತು ವಿರುದ್ಧವಾಗಿ ಕೇವಲ 5 ಸದಸ್ಯರು ಮತ ಚಲಾಯಿಸಿದ್ದು, ಮಸೂದೆಗೆ ಸುಲಭವಾಗಿ ಅಂಗೀಕಾರ ದೊರೆತಿದೆ. ಈ ಹೊಸ ನಿಯಮವು ಮುಖ್ಯವಾಗಿ ಮೆಕ್ಸಿಕೋದೊಂದಿಗೆ ವ್ಯ
Dec 111 min read


ಜೀವವೈವಿಧ್ಯ ರಕ್ಷಣೆಗಾಗಿ ನ್ಯೂಜಿಲೆಂಡ್ ಕಾಡು ಬೆಕ್ಕುಗಳ ನಿರ್ಮೂಲನೆಗೆ ಕಠಿಣ ಕ್ರಮ
ನ್ಯೂಜಿಲೆಂಡ್ ತನ್ನ ಅತಿಸೂಕ್ಷ್ಮ ಹಾಗೂ ಅಪರೂಪದ ಜೀವವೈವಿಧ್ಯವನ್ನು ರಕ್ಷಿಸಲು 2050ರೊಳಗೆ ದೇಶದಾದ್ಯಂತ ಕಾಡು ಬೆಕ್ಕುಗಳನ್ನು (Feral Cats) ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ರಾಷ್ಟ್ರೀಯ ಯೋಜನೆಗೆ ಕೈ ಹಾಕಿದೆ. ಸಂರಕ್ಷಣಾ ಸಚಿವ ತಮಾ ಪೊಟಾಕಾ ಅವರು ಕಾಡು ಬೆಕ್ಕುಗಳನ್ನು “stone cold killers” ಎಂದು ವರ್ಣಿಸಿದ್ದು, ಅವುಗಳನ್ನು ಅಧಿಕೃತವಾಗಿ Predator Free 2050 ಯೋಜನೆಯ ಪಟ್ಟಿಗೆ ಸೇರಿಸುವುದಾಗಿ ಘೋಷಿಸಿದ್ದಾರೆ. 2016ರಲ್ಲಿ ಪ್ರಾರಂಭವಾದ ಈ ಯೋಜನೆ ದೇಶದ ಸ್ಥಳೀಯ ಪಕ್ಷಿಗಳು, ಬಾವಲುಗಳು, ಹಲ್ಲಿಗಳು, ಕೀಟಗಳು ಮತ್ತು ಇನ್ನಿತರ ಅಪರೂಪದ ಜೀವಿಗಳಿಗೆ ಅಪಾಯಕಾರಿಯಾಗಿದೆ ಎಂದು ಗುರುತಿಸಲ
Dec 101 min read


ಋತುಚಕ್ರದ ರಜೆ ಆದೇಶಕ್ಕೆ ಹೈಕೋರ್ಟ್ನ ತಾತ್ಕಾಲಿಕ ತಡೆ; ಗಂಟೆಗಳಲ್ಲೇ ಆದೇಶ ಹಿಂಪಡೆ
ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರದ ಮುಟ್ಟಿನ ಕಡ್ಡಾಯ ರಜೆ ಆದೇಶಕ್ಕೆ ತಡೆ ನೀಡಿದೆ. ನ. 12ರಂದು ಜಾರಿಯಾಗಿದ್ದ ಈ ಆದೇಶದ ವಿರುದ್ಧ ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್ ಮೊರೆ ಹೋಗಿತ್ತು. ವಿವಿಧ ಕಾರ್ಮಿಕ ಕಾಯ್ದೆಗಳ ಅಡಿಯಲ್ಲಿ ಬರುವ ಸಂಸ್ಥೆಗಳ ಮಹಿಳೆಯರಿಗೂ ಈ ರಜೆ ಅನ್ವಯವಾಗುತ್ತದೆ ಎಂದು ಸರ್ಕಾರ ಸೂಚಿಸಿತ್ತು. ಆದರೆ, ರಜೆ ನೀತಿಗಳು ಆಂತರಿಕ ಆಡಳಿತಾತ್ಮಕ ವಿಷಯ ಎಂದು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್ ನಲ್ಲಿ ತಕರಾರು ತಗೆದಿದೆ. ಸಂಘದ ವಾದ ಆಲಿಸಿದ ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠ ತಡೆಯಾಜ್ಞೆ ನೀಡಿತ್ತು. ಆದರೆ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ
Dec 101 min read


"ದೇವಾಲಯದ ಹಣ ದೇವಾಲಯಕ್ಕೇ ಮೀಸಲು": ಸಹಕಾರಿ ಬ್ಯಾಂಕ್ಗಳಿಗೆ ನಿಧಿ ಬಳಕೆ ಇಲ್ಲ - ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನವದೆಹಲಿ: ದೇವಾಲಯದ ನಿಧಿಯನ್ನು ಆರ್ಥಿಕವಾಗಿ ದುರ್ಬಲವಾಗಿರುವ ಸಹಕಾರಿ ಬ್ಯಾಂಕುಗಳನ್ನು ಬೆಂಬಲಿಸಲು ಬಳಸಲಾಗದು. ದೇವಾಲಯದ ಹಣವು ಸಂಪೂರ್ಣವಾಗಿ ದೇವಾಲಯದ ಹಿತಾಸಕ್ತಿಗಳಿಗೆ ಮಾತ್ರ ಮೀಸಲಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಯಲ್ಯ ಬಾಗ್ನಿ ಅವರಿದ್ದ ನ್ಯಾಯಪೀಠವು ಈ ನಿರ್ಧಾರವನ್ನು ಪ್ರಕಟಿಸಿದೆ. ತಿರುನೆಲ್ಲಿ ದೇವಸ್ಥಾನದ ದೇವಸ್ವಂ ಠೇವಣಿಗಳನ್ನು ಹಿಂದಿರುಗಿಸುವಂತೆ ಕೇರಳ ಹೈಕೋರ್ಟ್ ನೀಡಿದ್ದ ಆದೇಶವನ್ನು ನ್ಯಾಯಪೀಠವು ಎತ್ತಿಹಿಡಿದಿದೆ. ಬ್ಯಾಂಕುಗಳು ಹಣವನ್ನು ಸುರಕ್ಷಿತ ರಾಷ್ಟ್ರೀಕೃತ ಬ್ಯಾಂಕ್ಗೆ ವರ್
Dec 101 min read


ಚಿನ್ನದ ಪದಕ ವಿಜೇತೆ ಧನಲಕ್ಷ್ಮಿ ಪೂಜಾರಿಗೆ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಅಭಿನಂದನೆ
ಬೆಳಗಾವಿ: ಢಾಕಾದಲ್ಲಿ ನಡೆದ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ರಾಜ್ಯದ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಅಭಿನಂದಿಸಿದರು. ಬುಧವಾರ ಸದನದ ಕಲಾಪ ವೀಕ್ಷಣೆಗಾಗಿ ಆಗಮಿಸಿದ್ದ ಧನಲಕ್ಷ್ಮಿ ಪೂಜಾರಿ ಮತ್ತು ಅವರ ತರಬೇತುದಾರರನ್ನು ಮುಖ್ಯಮಂತ್ರಿಗಳು ಸ್ವಾಗತಿಸಿ, ರಾಜ್ಯಕ್ಕೆ ಮತ್ತು ದೇಶಕ್ಕೆ ಹೆಮ್ಮೆ ತಂದಿರುವ ಅವರ ಸಾಧನೆಯನ್ನು ಶ್ಲಾಘಿಸಿ ಅಭಿನಂದನಾ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರವು ಧನ
Dec 101 min read


ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ – ಜೈಲಿನಲ್ಲಿ ದರ್ಶನ್ ಗಲಾಟೆ ವದಂತಿ, ಅಧಿಕಾರಿಗಳ ಖಂಡನೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇತರೆ ಆರೋಪಿಗಳ ಜೊತೆ ರಂಪಾಟ ನಡೆಸಿದ್ದಾರೆ ಎನ್ನುವ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ದರ್ಶನ್, ಆರ್. ನಾಗರಾಜ್, ಚಾಲಕ ಲಕ್ಷ್ಮಣ್, ಉದ್ಯಮಿ ಪ್ರದೂಷ್ ರಾವ್ ಹಾಗೂ ಆಟೋ ಚಾಲಕರು ಅನುಕುಮಾರ್ (ಅನು), ಜಗದೀಶ್ (ಜಗ್ಗ) – ಎಲ್ಲರೂ ಒಂದೇ ಬ್ಯಾರಕ್ನಲ್ಲಿ ಇರಿಸಿರುವುದು ತಿಳಿದುಬಂದಿದೆ. ದರ್ಶನ್ ಅವರು ಆರ್. ನಾಗರಾಜ್ ಹೊರತುಪಡಿಸಿ ಉಳಿದವರ ಜೊತೆ ಗಲಾಟೆ, ಅವಾಚ್ಯ ಶಬ್ದ ಬಳಕೆ ಹಾಗೂ ಕಾಲಿನಿಂದ ಒದ್ದಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದರೂ, ಕಾರಾಗೃಹದ ಎಸ್ಪಿ
Dec 91 min read


ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ, 23 ಮಂದಿಗೆ ಗಾಯ
ಜಪಾನ್: ಉತ್ತರ ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹಲವು ಮನೆಗಳು ನೆಲಸಮಗೊಂಡಿವೆ. ಘಟನೆಯಲ್ಲಿ 23 ಮಂದಿ ಗಾಯಗೊಂಡಿದ್ದಾರೆ. ಸುನಾಮಿ ಅಲೆಗಳು ಎದ್ದಿವೆ. ಅಮೋರಿ ಕರಾವಳಿಯಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಪೆಸಿಫಿಕ್ ಮಹಾಸಾಗರದಲ್ಲಿ ರಾತ್ರಿ 11.15 ಕ್ಕೆ ಭೂಕಂಪ ಸಂಭವಿಸಿದೆ. ಹಲವು ವಿಡಿಯೋಗಳು ವೈರಲ್ ಆಗಿವೆ.ಹಚಿನೋಹೆಯ ಹೋಟೆಲ್ನಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಇವಾಟೆ ಪ್ರಿಫೆಕ್ಚರ್ನ ಕುಜಿ ಬಂದರಿನಲ್ಲಿ 70 ಸೆಂ.ಮೀ.ವರೆಗಿನ ಸುನಾಮಿ ಅಲೆಗಳು ಎದ್ದಿವೆ.ಮುನ್ನೆಚ್ಚರಿಕೆಯಾಗಿ ದುರ್ಬಲ ಪ್ರದೇಶಗಳಲ್ಲಿರುವ ನಿವಾಸಿಗಳು ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂ
Dec 91 min read


ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ನಿಂದ ಸಹ ಕೈದಿಗಳಿಗೆ ಕಿರುಕುಳ ಆರೋಪ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಅವರು ತಮ್ಮ ಸಹ ಕೈದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ಬಾರಿ ದರ್ಶನ್ ಜೈಲು ಸೇರಿದಾಗಿನಿಂದ ಜೈಲಿನಲ್ಲಿ ಕಠಿಣ ನಿಯಮಗಳು ಜಾರಿಯಲ್ಲಿದ್ದು, ಇತ್ತೀಚೆಗೆ ಜೈಲಿನ ಪಾರ್ಟಿ ವಿಡಿಯೋ ವೈರಲ್ ಆದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ಆಗಿ ಐಪಿಎಸ್ ಅಧಿಕಾರಿ ಅಂಶು ಕುಮಾರ್ ನೇಮಕಗೊಂಡ ನಂತರ, ಜೈಲಿನಲ್ಲಿ ಅತಿ ಕಠಿಣ ರೂಲ್ಸ್ಗಳನ್ನು ಜಾರಿಗೆ ತಂದಿದ್ದಾರೆ. ಜೈಲಿನಲ್ಲ
Dec 81 min read


ಮತ್ತೆ ಅಲ್ಪ ಏರಿಕೆ ಕಂಡ ಬಂಗಾರದ ದರ
ಇಂದು, ಡಿಸೆಂಬರ್ 8, 2025 ರಂದು ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹13,042/ಗ್ರಾಂ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ₹11,955/ಗ್ರಾಂ ಇದೆ, ಚಿನ್ನದ ದರದಲ್ಲಿ ಅಲ್ಪ ಏರಿಕೆ ಕಂಡುಬಂದಿದ್ದು, ಬೆಳ್ಳಿ ಬೆಲೆ ಕೊಂಚ ಇಳಿಕೆಯಾಗಿದೆ. ಇಂದಿನ ಚಿನ್ನದ ದರ (ಡಿಸೆಂಬರ್ 8, 2025) 24 ಕ್ಯಾರೆಟ್ (1 ಗ್ರಾಂ): ₹13,042 22 ಕ್ಯಾರೆಟ್ (1 ಗ್ರಾಂ): ₹11,955 ಬೆಳ್ಳಿ ಬೆಲೆ (1 ಗ್ರಾಂ): ₹189
Dec 81 min read


ಮಂಗಳೂರಿನ ನೆಹರೂ ಮೈದಾನದಲ್ಲಿ ನೂತನ ಆಸ್ಟ್ರೋ ಟರ್ಫ್ ಫುಟ್ಬಾಲ್ ಕ್ರೀಡಾಂಗಣ ಉದ್ಘಾಟನೆ
ಮಂಗಳೂರು ನಗರದ ಹೃದಯಭಾಗದಲ್ಲಿರುವ ನೆಹರೂ ಮೈದಾನದಲ್ಲಿ ಸುಸಜ್ಜಿತ ಆಸ್ಟ್ರೋ ಟರ್ಫ್ ಫುಟ್ಬಾಲ್ ಕ್ರೀಡಾಂಗಣವು ಬುಧವಾರದಂದು ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕ್ರೀಡಾಭಿಮಾನಿಗಳ ಬಹುಕಾಲದ ಕನಸಾಗಿದ್ದ ಈ ಕ್ರೀಡಾಂಗಣವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಗೊಂಡಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಈ ಕ್ರೀಡಾಂಗಣಕ್ಕೆ ಇನ್ನಷ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಇದನ್ನು ಉನ್ನತ ದರ್ಜೆಗೆ ಏರಿಸಲಾಗುವುದು ಎಂದು ಭರವಸೆ ನ
Dec 31 min read


ಪ್ರಯಾಣಿಕರ ತುರ್ತು ಚಿಕಿತ್ಸೆಗೆ ಮಂಗಳೂರಿನಲ್ಲಿ ವಿಮಾನ ಇಳಿಕೆ: ಏರ್ ಇಂಡಿಯಾ ಎಕ್ಸ್ಪ್ರೆಸ್ಗೆ ಕ್ಷಿಪ್ರ ಸ್ಪಂದನೆ
ಮಂಗಳೂರು: ರಿಯಾದ್ನಿಂದ ತಿರುವನಂತಪುರಕ್ಕೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವೊಂದು (Air India Express), ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯ ಎದುರಾದ ಹಿನ್ನೆಲೆಯಲ್ಲಿ, ಸೋಮವಾರ ತಡರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ವೈದ್ಯಕೀಯ ತಂಡದ ಕ್ಷಿಪ್ರ ಪ್ರತಿಕ್ರಿಯೆಯಿಂದಾಗಿ ಅಸ್ವಸ್ಥ ಪ್ರಯಾಣಿಕರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಿದೆ. ರಿಯಾದ್ನಿಂದ ತಿರುವನಂತಪುರಂ ಕಡೆಗೆ ಪ್ರಯಾಣಿಸುತ್ತಿದ್ದ ವಿಮಾನದೊಳಗೆ ಸು
Dec 31 min read


ಇಂದಿನ ಚಿನ್ನದ ದರ
ಡಿಸೆಂಬರ್ 3, 2025 ರಂದು, ಬೆಂಗಳೂರಿನಲ್ಲಿ 1 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ₹13,058 ಮತ್ತು 1 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹11,970 ಆಗಿದೆ. ಬೆಳ್ಳಿ ಬೆಲೆ 1 ಗ್ರಾಂಗೆ ₹191 ಕ್ಕೆ ತಲುಪಿದೆ. ಚಿನ್ನ ಮತ್ತು ಬೆಳ್ಳಿ ದರಗಳು ಏರಿಕೆ ಕಂಡಿವೆ. 24 ಕ್ಯಾರಟ್ ಚಿನ್ನ (1 ಗ್ರಾಂ): ₹13,058 22 ಕ್ಯಾರಟ್ ಚಿನ್ನ (1 ಗ್ರಾಂ): ₹11,970 ಬೆಳ್ಳಿ (1 ಗ್ರಾಂ): ₹191
Dec 31 min read


'ಕಾಂತಾರ ಅಧ್ಯಾಯ 1' ದೈವದ ಪಾತ್ರದ ಅನುಕರಣೆ: ವಿವಾದದ ಬಳಿಕ ಕ್ಷಮೆಯಾಚಿಸಿದ ನಟ ರಣವೀರ್ ಸಿಂಗ್
ಗೋವಾದಲ್ಲಿ ಇತ್ತೀಚೆಗೆ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು 'ಕಾಂತಾರ ಅಧ್ಯಾಯ 1' ಚಿತ್ರದ ದೈವದ ಪಾತ್ರವನ್ನು ತಮಾಷೆಯಾಗಿ ಅನುಕರಣೆ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ. ರಣವೀರ್ ಸಿಂಗ್ ಅವರು ದೈವದ ಪಾತ್ರವನ್ನು 'ಹೆಣ್ಣು ದೆವ್ವ' ಎಂದು ಉಲ್ಲೇಖಿಸಿ ಟೀಕೆಗೆ ಗುರಿಯಾಗಿದ್ದರು. ಕರಾವಳಿ ಪ್ರದೇಶದ ಹಲವರು ಈ ಹೇಳಿಕೆ ಮತ್ತು ಅನುಕರಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು, ನಟನು ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ವ್ಯಾಪಕವಾಗಿ ಆಗ್ರಹಿಸಿದ್ದರು. ಈ ವಿವಾದವು ಹಿಂದೂ ಸಮುದಾಯದ ಭಾವ
Dec 21 min read


ಸಮಂತಾ ಸೈಲೆಂಟ್ ಮರುಮದುವೆ: ಇಶಾ ಯೋಗ ಕೇಂದ್ರದಲ್ಲಿ ರಾಜ್ ನಿಧಿಮೋರ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನಟಿ!
ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಅವರು ಯಾವುದೇ ಅದ್ದೂರಿತನವಿಲ್ಲದೆ ಸಿಂಪಲ್ ಆಗಿ ಮರುಮದುವೆಯಾಗಿದ್ದಾರೆ. ಈ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಸಮಂತಾ ಅವರು ತಮ್ಮ ಆಪ್ತ ಗೆಳೆಯ ರಾಜ್ ನಿಧಿಮೋರ್ ಜೊತೆ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಯೋಗ ಕೇಂದ್ರದ ಲಿಂಗ ಭೈರವಿ ದೇವಸ್ಥಾನದಲ್ಲಿ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇವಲ 30 ಆಪ್ತ ಅತಿಥಿಗಳ ಸಮ್ಮುಖದಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಸಮಂತಾ ಅವರು ಕೆಂಪು ಸೀರೆಯಲ್ಲಿ ಮಿಂಚಿದರೆ, ಮದುಮಗ ರಾಜ್ ನಿಧಿಮೋರ್ ಬಿಳಿ ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಜೋಡಿ
Dec 21 min read
Archive
bottom of page


