;
top of page

ಪ್ಯಾರಾಗ್ಲೈಡಿಂಗ್ ವೇಳೆ ತಾಂತ್ರಿಕ ದೋಷ - ಪ್ರವಾಸಿಯ ಪ್ರಾಣ ಉಳಿಸಿ ಪೈಲಟ್ ಸಾವು

  • Writer: sathyapathanewsplu
    sathyapathanewsplu
  • Dec 28, 2025
  • 1 min read

ಹಿಮಾಚಲ ಪ್ರದೇಶದ ವಿಶ್ವವಿಖ್ಯಾತ ಬೀರ್ ಬಿಲ್ಲಿಂಗ್ ಪ್ಯಾರಾಗ್ಲೈಡಿಂಗ್ ತಾಣದಲ್ಲಿ ನಡೆದ ಭೀಕರ ಅಪಘಾತದಲ್ಲಿ ಅನುಭವಿ ಪೈಲಟ್ ಒಬ್ಬರು ಮೃತಪಟ್ಟಿದ್ದಾರೆ. ಮಂಡಿ ಜಿಲ್ಲೆಯ ಬಾರ್ಶನ್ ಗ್ರಾಮದ ನಿವಾಸಿ ಮೋಹನ್ ಸಿಂಗ್ (35) ಮೃತ ದುರ್ದೈವಿ. ಶುಕ್ರವಾರ ಮಧ್ಯಾಹ್ನ ಪ್ರವಾಸಿಯೊಬ್ಬರ ಜೊತೆ ಟಂಡೆಮ್ ಹಾರಾಟ ನಡೆಸುತ್ತಿದ್ದಾಗ, ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಪ್ಯಾರಾಗ್ಲೈಡರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ.

ಹಾರಾಟದ ವೇಳೆ ಹಠಾತ್ ಗಾಳಿಯ ದಿಕ್ಕು ಬದಲಾದ ಕಾರಣ ಗ್ಲೈಡರ್ ನಿಯಂತ್ರಣ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಪೈಲಟ್ ಮೋಹನ್ ಸಿಂಗ್ ಅವರು ತಮ್ಮ ಪ್ರಾಣದ ಹಂಗು ತೊರೆದು ಜೊತೆಗಿದ್ದ ಪ್ರವಾಸಿಯ ಸುರಕ್ಷತೆಗೆ ಆದ್ಯತೆ ನೀಡಿದರು. ಗ್ಲೈಡರ್ ಲಾಂಚ್ ಸೈಟ್‌ನ ಕೆಳಗಿರುವ ರಸ್ತೆಯ ಮೇಲೆ ಪತನಗೊಂಡಿದ್ದು, ಪೈಲಟ್ ಮೋಹನ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಮತ್ತು ಗಾಯಗೊಂಡಿದ್ದ ಪ್ರವಾಸಿಯನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರಾದರೂ, ಪೈಲಟ್ ಚಿಕಿತ್ಸೆ ಫಲಕಾರಿಯಾಗದೆ ದಾರಿಯಲ್ಲೇ ಮೃತಪಟ್ಟಿದ್ದಾರೆ.

ಮೃತ ಮೋಹನ್ ಸಿಂಗ್ ಸುಮಾರು 15 ವರ್ಷಗಳ ಹಾರಾಟದ ಅನುಭವ ಹೊಂದಿದ್ದರು ಹಾಗೂ ಪ್ಯಾರಾಗ್ಲೈಡಿಂಗ್ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಪಘಾತದಲ್ಲಿ ಗಾಯಗೊಂಡ ಪಶ್ಚಿಮ ಬಂಗಾಳ ಮೂಲದ ಪ್ರವಾಸಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಬೀರ್ ಬಿಲ್ಲಿಂಗ್‌ನಲ್ಲಿ ಶನಿವಾರ ಪ್ಯಾರಾಗ್ಲೈಡಿಂಗ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಮೃತರ ಗೌರವಾರ್ಥ ಮೌನ ಆಚರಿಸಲಾಯಿತು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಾಂತ್ರಿಕ ದೋಷದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page