ಯೆಮನ್‌ನಲ್ಲಿ ಭೀಕರ ಘರ್ಷಣೆ: ಹೌತಿ ದಾಳಿಗೆ 81 ಮಂದಿ ಸಾವು

ಯೆಮನ್‌ನ ಹೌತಿ ಬಂಡುಕೋರರು ಮತ್ತು ಸೌದಿ ಬೆಂಬಲಿತ ಸರ್ಕಾರಿ ಪಡೆಗಳ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ 81 ಜನರು ಮೃತಪಟ್ಟಿದ್ದಾರೆ. ಇರಾನ್ ಬೆಂಬಲಿತ ಹೌತಿಗಳು ಕೆಂಪು ಸಮುದ್ರದ ದಕ್ಷಿಣ ಪ್ರವೇಶದ್ವಾರವಾದ ಬಾಬ್ ಅಲ್-ಮಂದಾಬ್ ಜಲಸಂಧಿಯ ನಿಯಂತ್ರಣಕ್ಕಾಗಿ ಕರಾವಳಿ ಪ್ರದೇಶಗಳಲ್ಲಿ ರಾಕೆಟ್ ಹಾಗೂ ಡ್ರೋನ್ ದಾಳಿ ನಡೆಸಿದ್ದಾರೆ.
ತೈಲ ರಫ್ತಿಗೆ ಪ್ರಮುಖ ಮಾರ್ಗವಾಗಿರುವ ಕೆಂಪು ಸಮುದ್ರದಲ್ಲಿ ಸೌದಿ ಹಡಗುಗಳ ಮೇಲೆ ಹೌತಿಗಳು ದಾಳಿ ತೀವ್ರಗೊಳಿಸಿದ್ದು, ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.







Comments