ಕರಡು ಮತದಾರರ ಪಟ್ಟಿಯಿಂದ 20 ಲಕ್ಷ ಹೆಸರುಗಳು ಶಾಶ್ವತ ಡಿಲೀಟ್: ಆಯೋಗದ ಸಮೀಕ್ಷೆಯಲ್ಲಿ ಬಹಿರಂಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಈಗ ಅಂತಿಮ ಹಂತ ತಲುಪಿದೆ. ಜೂನ್ 30ರಿಂದ ಆರಂಭಗೊಂಡಿದ್ದ ಮನೆ-ಮನೆ ಸಮೀಕ್ಷೆ ಆಗಸ್ಟ್ 8ಕ್ಕೆ ಮುಕ್ತಾಯಗೊಳ್ಳಲಿದ್ದು, ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ.

ಒಟ್ಟು 5.54 ಕೋಟಿ ಮತದಾರರಲ್ಲಿ ಬಿಎಲ್‌ಒ ನಡೆಸಿದ ಪರಿಶೀಲನೆಯಲ್ಲಿ ಬೃಹತ್ ಸಂಖ್ಯೆಯ ಅಂದರೆ ಸುಮಾರು 86.64 ಲಕ್ಷ ಮತದಾರರನ್ನು ‘ಎಎಸ್‌ಡಿಡಿಒ’ (ಸ್ಥಳಾಂತರ/ಮೃತ/ದ್ವಿಪ್ರತಿ) ಎಂದು ವರ್ಗೀಕರಿಸಲಾಗಿದೆ. ಇದರಿಂದ ಪ್ರಕ್ರಿಯೆಯ ಅಂತ್ಯಕ್ಕೆ ಶೇ.15.63ರಷ್ಟು ಹೆಸರುಗಳು ಪಟ್ಟಿಯಿಂದ ಹೊರಗುಳಿಯುವ ಆತಂಕ ಎದುರಾಗಿದೆ.
ಪತ್ತೆಯಾದವರಲ್ಲಿ ಮೃತಪಟ್ಟವರು ಹಾಗೂ ದ್ವಿಪ್ರತಿ ಹೆಸರಿರುವ ಸುಮಾರು 20 ಲಕ್ಷ ಮತದಾರರ ವಿವರ ಶಾಶ್ವತವಾಗಿ ಡಿಲೀಟ್ ಆಗಲಿದೆ. ಉಳಿದ 66 ಲಕ್ಷದಷ್ಟು ಅನುಮಾನಾಸ್ಪದ ಮತದಾರರು ತಮ್ಮ ಹೆಸರನ್ನು ಪಟ್ಟಿಯಲ್ಲಿ ಮರುಸೇರ್ಪಡೆಗೊಳಿಸಲು ಸೂಕ್ತ ಜಾಗ್ರತೆ ವಹಿಸಬೇಕಾಗಿದೆ.







Comments