ಟ್ರಕ್ಕಿಂಗ್ ವೇಳೆ ನಾಪತ್ತೆಯಾಗಿದ್ದ ಚಾರಣಿಗ ಯುವತಿ 4 ದಿನಗಳ ಬಳಿಕ ಸುರಕ್ಷಿತ: ದಟ್ಟಾರಣ್ಯದಲ್ಲಿ ಬದುಕುಳಿದ ಶರಣ್ಯ ಸಾಹಸಗಾಥೆ

ಮಡಿಕೇರಿ ತಾಲೂಕಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ, ನಾಲ್ಕು ದಿನಗಳ ಕಾಲ ದಟ್ಟಾರಣ್ಯದಲ್ಲಿ ಕಳೆದ ನಂತರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಏಕಾಂಗಿಯಾಗಿ ಚಾರಣಕ್ಕೆ ತೆರಳಿದ್ದ ಇವರು, ನಾಯಿಗಳ ಜೊತೆ ಆಟವಾಡುತ್ತಾ ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದರು. ಕಾಡಾನೆಗಳ ಭೀತಿಯಿರುವ ಈ ಪ್ರದೇಶದಲ್ಲಿ ಆಹಾರವಿಲ್ಲದೆ, ಕೇವಲ ಒಂದು ಬಾಟಲಿ ನೀರಿನ ಸಹಾಯದಿಂದ ಧೈರ್ಯವಾಗಿ ದಿನ ದೂಡಿದ್ದಾರೆ. 15 ವರ್ಷಗಳ ಚಾರಣದ ಅನುಭವವಿದ್ದ ಶರಣ್ಯ, ಸಂಕಷ್ಟದ ಸಮಯದಲ್ಲಿ ಧೈರ್ಯ ಕಳೆದುಕೊಳ್ಳದೆ ಬದುಕುಳಿದಿದ್ದಾರೆ.

ಪೊಲೀಸರು, ಅರಣ್ಯ ಇಲಾಖೆ ಹಾಗೂ ನಕ್ಸಲ್ ನಿಗ್ರಹ ಪಡೆಯ ಸುದೀರ್ಘ ಕಾರ್ಯಾಚರಣೆಯ ನಂತರ ಸ್ಥಳೀಯರ ನೆರವಿನಿಂದ ಶರಣ್ಯ ಪತ್ತೆಯಾಗಿದ್ದಾರೆ. ರಕ್ಷಣಾ ತಂಡವು ಡ್ರೋಣ್ ಬಳಸಬಹುದೆಂಬ ನಿರೀಕ್ಷೆಯಲ್ಲಿ ಅವರು ಬಯಲು ಪ್ರದೇಶದಲ್ಲೇ ಉಳಿದುಕೊಂಡಿದ್ದರು. ನಾಲ್ಕು ದಿನಗಳ ಕಾಡಿನ ರೋಚಕ ಅನುಭವದ ನಂತರ ಇಂದು ನಗುಮೊಗದಿಂದಲೇ ಹೊರಬಂದ ಶರಣ್ಯ, ತನಗೆ ನೆರವಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಸದ್ಯ ಅವರು ಆರೋಗ್ಯವಾಗಿದ್ದು, ಅವರ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.







Comments