;
top of page

ಮೀಸಲು ಕ್ಷೇತ್ರದ ಅಂಬೇಡ್ಕರ್ ಭವನ ಅನೈತಿಕ ಚಟುವಟಿಕೆಗಳಿಗೆ ಮೀಸಲೇ?

Aug 23
1 min read

ಹೌದು, ಸುಳ್ಯ ವಿಧಾನಸಭಾ ಕ್ಷೇತಮೀಸಲುಕ್ಷೇತ್ರ.ಹಾಗೆಯೇ ಸುಳ್ಯತಾಲ್ಲೂಕುಅಭಿವೃದ್ಧಿವಿಚಾರದಲ್ಲಿ ಬಹಳ ಹಿಂದಿನಿಂದಲೂ ಹಿಂದೆ ಉಳಿದಿದೆ ಎನ್ನುವುದಕ್ಕೆ ಇಲ್ಲಿನ ಅಂಬೇಡ್ಕರ್ ಭವನ ಸಾಕ್ಷಿ. ..


ಸುಮಾರು 16 ವರ್ಷಗಳ ಹಿಂದೆ ಶಂಕುಸ್ಥಾಪನೆಗೊಂಡ ಅಂಬೇಡ್ಕರ್ ಭವನ ಇನ್ನು ಪೂರ್ಣಗೊಳ್ಳಲಿಲ್ಲ ಎನ್ನುವುದು ವಿಪರ್ಯಾಸವೇ ಸರಿ. ಸುಳ್ಯದ ಅಂಬೇಟಡ್ಕ ಬಳಿಯಲ್ಲಿ ಹಲವಾರು ಕೋಟಿ ರೂಪಾಯಿಯ ಯೋಜನೆ ಇನ್ನೂ ಪೂರ್ಣಗೊಳ್ಳಲಿಲ್ಲ. ಜನಸಾಮಾನ್ಯರ ತೆರಿಗೆಯ ಕೋಟಿ ಕೋಟಿ ರೂಪಾಯಿ ಅನೈತಿಕ ಚಟುವಟಿಕೆಗಳಿಗೆ ಉಪಯೋಗವಾಗುತ್ತಿದೆ.




ಬಹಳ ದೊಡ್ಡಮಟ್ಟದ ಕಟ್ಟಡ ಕೇವಲ ಒಂದು ಹಂತದಲ್ಲಿ ನಿರ್ಮಾಣಗೊಂಡಿದೆ. ದೊಡ್ಡ ದೊಡ್ಡ ಪಿಲ್ಲರ್ ಗಳು ಅನುದಾನವನ್ನು ಹುಡುಕುತ್ತಾ ಕಾಯುತ್ತಿದೆ. .. ಕಾಡುಗಳಿಂದ ಅವರಿಸಿರುವ ಈ ಅಂಬೇಡ್ಕರ್ ಭವನವನ್ನು ವರುಷಕ್ಕೊಮ್ಮೆ ಸ್ವಚ್ಛಗೊಳಿಸಲಾಗುತ್ತಿದೆ . ಅದೆಷ್ಟೋ ಸಂಘಟನೆಗಳು ಮನವಿ ಮಾಡಿವೆ. ಪ್ರತಿಭಟನೆ ಮಾಡುತ್ತಿವೆ. ಚುನಾವಣೆ ಸಮಯದಲ್ಲಿ ಜನಪ್ರತಿನಿದಿಗಳು ಕಾಮಗಾರಿ ಪೂರ್ಣಗೊಳ್ಳುವ ಸುಳ್ಳು ಭರವಸೆಯನ್ನು ನೀಡುವುದನ್ನು ಮುಂದುವರಿಸಿಕೊಂಡೆ ಬಂದಿದ್ಧಾರೆ. ಯಾರೇ ಅಧಿಕಾರಿ ಬಂದರು ಯಾವುದೇ ಸರ್ಕಾರ ಬಂದರು ಸುಳ್ಯದ ಅಂಬೇಡ್ಕರ್ ಭವನ ನಿರ್ಮಾಣಗೊಳ್ಳುವುದು ಕನಸಿನ ಮಾತಾಗಿ ಉಳಿದಿದೆ. ಜಾಗದ ಸಮಸ್ಯೆಯೋ, ಜನಪ್ರತಿನಿಧಿಗಳ ಬೇಜವಾಬ್ಧಾರಿಯೋ, ಅಧಿಕಾರಿಗಳ ನಿರಾಸಾಕ್ತಿಯೋ ಗೊತ್ತಿಲ್ಲ. ಮುಂದಿನ ದಿನಗಲ್ಲಲಾದರೂ ಮೀಸಲು ಕ್ಷೇತ್ರದ ಅಂಬೇಡ್ಕರ್ ಭವನ ನಿರ್ಮಾಣಗೊಳ್ಳಲಿ ಎನ್ನುವುದೇ ಸುಳ್ಯದ ಜನರ ಆಶಯ. .

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page