ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಗರಡಿಯಲ್ಲಿ ಚೌತಿ ತಂಬಿಲ ಮತ್ತು ಕದಿರು ಪ್ರಸಾದ ವಿತರಣೆ

ಇತಿಹಾಸ ಪ್ರಸಿದ್ಧ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯರ ಆದಿ ಬೈದೇರುಗಳ ಗರಡಿಯಲ್ಲಿ ಪೂರ್ವ ಸಂಪ್ರದಾಯದಂತೆ ಪತ್ತನಾಜೆಯಂದು ಮುಚ್ಚಿದ್ದ ಗರ್ಭಗುಡಿಯ ಬಾಗಿಲನ್ನು ಚೌತಿಯಂದು ತೆರೆದು ವಿಶೇಷ ತಂಬಿಲ ಸೇವೆ ನೆರವೇರಿಸಲಾಯಿತು.
ಬೈದೇರುಗಳ ತಂಬಿಲ, ದರ್ಶನ ಬಲಿ ಹಾಗೂ ದೇಯಿ ಬೈದೇತಿಯವರ ಗರ್ಭಗುಡಿಯಲ್ಲಿ ವಿಶೇಷ ತಂಬಿಲ ನಡೆದು ಭಕ್ತರಿಗೆ ಕದಿರು ಪ್ರಸಾದ ವಿತರಿಸಲಾಯಿತು. ಕಂಚುಕಲ್ಲಿಗೆ ತೆಂಗಿನಕಾಯಿ ಒಡೆದು ಊರಿನ ಕ್ಷೇಮಕ್ಕಾಗಿ ಪ್ರಾರ್ಥಿಸಲಾಯಿತು. ಅನುವಂಶಿಕ ಆಡಳಿತದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಭಕ್ತರಿಗೆ ಗಂಧ ಪ್ರಸಾದ ನೀಡಲಾಯಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಪದ್ಮಾ ಆರ್. ಶೆಟ್ಟಿ, ಎನ್.ಜಿ. ಲೋಕನಾಥ ರೈ, ಅಲೆಂಗಾರ ರಘುನಾಥ ರೈ, ಕಟ್ಟಬೀಡು ಕುಟುಂಬಸ್ಥರು ಹಾಗೂ ಊರ-ಪರಊರಿನ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.







Comments