;
top of page

ಬೆಲೆ ಏರಿಕೆ ಬಿಸಿ: ಸಕ್ಕರೆ, ಬೆಲ್ಲದ ದರ ಏಕಾಏಕಿ ಜಿಗಿತ, ಜನಸಾಮಾನ್ಯರು ಕಂಗಾಲು!

Aug 29
1 min read

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದ್ದು, ಸಕ್ಕರೆ ಮತ್ತು ಬೆಲ್ಲದ ದರ ಏಕಾಏಕಿ ಹೆಚ್ಚಾಗಿ ಗ್ರಾಹಕರಿಗೆ ಕಹಿಯಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕೆ.ಜಿಗೆ 66 ರೂಪಾಯಿ ಇದ್ದ ಸಕ್ಕರೆ ದರ ಈಗ 70 ರೂಪಾಯಿಗೆ ತಲುಪಿದೆ.

ಇನ್ನು ಬೆಲ್ಲದ ಬೆಲೆಯಲ್ಲಿ ಭಾರಿ ಜಿಗಿತ ಕಂಡಿದ್ದು, ನಾಲ್ಕು ದಿನಗಳ ಹಿಂದೆ ಕೆ.ಜಿಗೆ 68 ರೂಪಾಯಿ ಇದ್ದದ್ದು ಈಗ ಬರೋಬ್ಬರಿ 12 ರೂಪಾಯಿ ಹೆಚ್ಚಳವಾಗಿ 80 ರೂಪಾಯಿಗೆ ಏರಿಕೆಯಾಗಿದೆ. ಈ ದಿಢೀರ್ ದರ ಏರಿಕೆ ಮಧ್ಯಮ ವರ್ಗ ಹಾಗೂ ಬಡಜನರ ಮಾಸಿಕ ಆಯವ್ಯಯದ ಮೇಲೆ ಗಂಭೀರ ಪರಿಣಾಮ ಬೀರಿದೆ.


Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page