ಸೆಪ್ಟೆಂಬರ್ 26ರಿಂದ 5 ದಿನ ಬ್ಯಾಂಕ್‌ಗಳ ಸೇವೆ ಲಭ್ಯವಿಲ್ಲ: ಸತತ ರಜೆಯಿಂದ ಗ್ರಾಹಕರಿಗೆ ಸಂಕಷ್ಟ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರು ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರೊಂದಿಗೆ ಸೆಪ್ಟೆಂಬರ್ 26 ಹಾಗೂ 27ರಂದು ನಾಲ್ಕನೇ ಶನಿವಾರ ಮತ್ತು ಭಾನುವಾರದ ಸಾಮಾನ್ಯ ರಜೆ ಬಂದಿರುವುದರಿಂದ, ಸತತ ಐದು ದಿನಗಳ ಕಾಲ ದೇಶದಾದ್ಯಂತ ಬ್ಯಾಂಕ್ ಶಾಖೆಗಳು ಸಂಪೂರ್ಣವಾಗಿ ಮುಚ್ಚಿರಲಿವೆ.
ಈ ಹಿಂದೆ ಸೆಪ್ಟೆಂಬರ್ 11ರಂದು ಬ್ಯಾಂಕ್ ನೌಕರರ ಒಕ್ಕೂಟ ಮುಷ್ಕರ ನಡೆಸಿತ್ತು. ಆದರೆ, ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಯೋಜನೆಯಂತೆ ಸೆಪ್ಟೆಂಬರ್ 28ರಿಂದ ಮತ್ತೆ ಮುಷ್ಕರ ಮುಂದುವರಿಸಲು ತೀರ್ಮಾನಿಸಲಾಗಿದೆ. ಈ ಮುಷ್ಕರದ ನಂತರವೂ ಬೇಡಿಕೆ ಈಡೇರದಿದ್ದರೆ, ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಂಘಟನೆಗಳು ಎಚ್ಚರಿಸಿವೆ.
ಸತತ 5 ದಿನಗಳ ಕಾಲ ಬ್ಯಾಂಕ್ ಕೆಲಸಗಳು ಸ್ಥಗಿತಗೊಳ್ಳುವುದರಿಂದ, ಕಚೇರಿಗೆ ನೇರವಾಗಿ ತೆರಳಿ ಮಾಡಬೇಕಾದ ತುರ್ತು ವಹಿವಾಟುಗಳನ್ನು ಗ್ರಾಹಕರು ಶುಕ್ರವಾರದೊಳಗೇ ಪೂರ್ಣಗೊಳಿಸಿಕೊಳ್ಳುವುದು ಸೂಕ್ತ.
ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ ಎಟಿಎಂ, ನಗದು ಠೇವಣಿ ಯಂತ್ರಗಳು (CDWM), ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ ಮತ್ತು ಕಸ್ಟಮರ್ ಸರ್ವಿಸ್ ಪಾಯಿಂಟ್‌ಗಳಂತಹ ಡಿಜಿಟಲ್ ಸೇವೆಗಳು ಗ್ರಾಹಕರಿಗೆ 24 ಗಂಟೆಯೂ ಲಭ್ಯವಿರಲಿವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಎಟಿಎಂಗಳಲ್ಲಿ ನಗದು ಅಭಾವ ಎದುರಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುಂಜಾಗ್ರತೆ ವಹಿಸುವುದು ಒಳಿತು.







Comments