ಫಿಫಾ ವಿಶ್ವಕಪ್: ರೊನಾಲ್ಡೊ ಅಬ್ಬರ, ಪೋರ್ಚುಗಲ್ಗೆ ಭರ್ಜರಿ ಜಯದೊಂದಿಗೆ ಐತಿಹಾಸಿಕ ದಾಖಲೆ!

ಫಿಫಾ ವಿಶ್ವಕಪ್ನ 45ನೇ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ನಾಯಕತ್ವದ ಪೋರ್ಚುಗಲ್ ತಂಡ ಉಜ್ಬೇಕಿಸ್ತಾನ್ ವಿರುದ್ಧ 5-0 ಅಂತರದ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ರೊನಾಲ್ಡೊ ಎರಡು ಆಕರ್ಷಕ ಗೋಲುಗಳನ್ನು ಗಳಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಅಪರೂಪದ ಮಹಾನ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಕಳೆದ ಪಂದ್ಯದಲ್ಲಿ ಗೋಲು ಗಳಿಸದೆ ಟೀಕೆಗೆ ಒಳಗಾಗಿದ್ದ 41 ವರ್ಷದ ರೊನಾಲ್ಡೊ, ಈ ಪಂದ್ಯದಲ್ಲಿ ಎರಡು ಗೋಲು ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಪೋರ್ಚುಗಲ್ನ ಲೆಜೆಂಡ್ ಆಟಗಾರ ‘ಯುಸೇಬಿಯೊ’ ಅವರ 60 ವರ್ಷಗಳ ಹಳೆಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಜೊತೆಗೆ ವಿಶ್ವಕಪ್ನ ಸತತ 6 ಆವೃತ್ತಿಗಳಲ್ಲಿ ಗೋಲು ಬಾರಿಸಿದ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2003ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಪದಾರ್ಪಣೆ ಮಾಡಿದ್ದ ರೊನಾಲ್ಡೊ, ಇದುವರೆಗೆ 230 ಪಂದ್ಯಗಳಲ್ಲಿ ದಾಖಲೆಯ 145 ಗೋಲುಗಳನ್ನು ಗಳಿಸಿದ್ದಾರೆ. 2016ರಲ್ಲಿ ಪೋರ್ಚುಗಲ್ಗೆ ಯುರೋಪಿಯನ್ ಚಾಂಪಿಯನ್ಶಿಪ್ ತಂದುಕೊಟ್ಟಿದ್ದ ರೊನಾಲ್ಡೊ ಅವರಿಗೆ ಇದು ಕೊನೆಯ ವಿಶ್ವಕಪ್ ಪಂದ್ಯಾವಳಿಯಾಗುವ ಸಾಧ್ಯತೆಯಿದೆ.







Comments