PhD ನಕಲಿ ಶಂಕೆ: 452 ಬೋಧಕರಿಗೆ ಕಾಲೇಜು ಶಿಕ್ಷಣ ಇಲಾಖೆ ಶಾಕ್!

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 452 ಅತಿಥಿ ಉಪನ್ಯಾಸಕರ ಪಿಎಚ್‌ಡಿ (PhD) ಪದವಿಯ ಸತ್ಯಾಸತ್ಯತೆ ಪರಿಶೀಲನೆಗೆ ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.
2025-26ರ ನೇಮಕಾತಿಯಲ್ಲಿ 'PhD ಇದೆ' ಎಂದು ನಮೂದಿಸಿದ್ದ ಅಭ್ಯರ್ಥಿಗಳು, 2026-27ರ ಆನ್‌ಲೈನ್ ಅರ್ಜಿಯಲ್ಲಿ ಈ ಅರ್ಹತೆಯನ್ನು ಕ್ಲೇಮ್ ಮಾಡದಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಇಲಾಖೆಯು ಸಂಬಂಧಪಟ್ಟ ಉಪನ್ಯಾಸಕರಿಗೆ ನೋಟಿಸ್ ಜಾರಿ ಮಾಡಿದೆ.
ನೋಟಿಸ್ ಪಡೆದವರಲ್ಲಿ ಕಲಬುರಗಿ, ಯಾದಗಿರಿ, ಬೀದರ್, ಹುಬ್ಬಳ್ಳಿ ಹಾಗೂ ರಾಯಚೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದವರೇ ಹೆಚ್ಚಾಗಿದ್ದಾರೆ. ನೋಟಿಸ್ ತಲುಪಿದ 7 ದಿನಗಳೊಳಗೆ ಉಪನ್ಯಾಸಕರಿಂದ ಲಿಖಿತ ಸ್ಪಷ್ಟನೆ ಮತ್ತು ದಾಖಲೆಗಳನ್ನು ಪಡೆದು ಸಲ್ಲಿಸುವಂತೆ ಪ್ರಾಂಶುಪಾಲರಿಗೆ ಸೂಚಿಸಲಾಗಿದ್ದು, ದಾಖಲೆಗಳ ತನಿಖೆ ನಂತರ ಮುಂದಿನ ಕಾನೂನು ಕ್ರಮ ಜರುಗಲಿದೆ.







Comments