ಪಿಜಿ ಮತ್ತು ಹಾಸ್ಟೆಲ್‌ಗಳ ತಪಾಸಣೆಗೆ ಸಚಿವ ಯು.ಟಿ. ಖಾದರ್ ಸೂಚನೆ

ಬೆಂಗಳೂರು: ಹೋಟೆಲ್ ಹಾಗೂ ಆಹಾರ ತಯಾರಿಕಾ ಘಟಕಗಳ ಮೇಲಿನ ದಾಳಿಯ ನಂತರ, ಇದೀಗ ರಾಜ್ಯದಲ್ಲಿರುವ ಪೇಯಿಂಗ್ ಗೆಸ್ಟ್ (ಪಿಜಿ) ಮತ್ತು ಸರ್ಕಾರಿ ಹಾಸ್ಟೆಲ್‌ಗಳ ತಪಾಸಣೆ ನಡೆಸುವಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಆಹಾರ ಮತ್ತು ಔಷಧಿ ಆಡಳಿತ (ಎಫ್‌ಡಿಎ) ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಿಜಿಗಳಲ್ಲಿ ನೀಡುವ ಆಹಾರದಲ್ಲಿ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗುತ್ತಿರುವ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಇಲಾಖೆಯು ನಿಯಮ ಪಾಲಿಸದ ಹೋಟೆಲ್‌ಗಳಿಗೆ ಭಾರೀ ದಂಡ ವಿಧಿಸಿದೆ. ಇದೀಗ ಆಹಾರ ಇಲಾಖೆಯ ಕ್ಯೂಆರ್ ಕೋಡ್ ಮತ್ತು ಸಾರ್ವಜನಿಕರ ದೂರುಗಳ ಆಧಾರದ ಮೇಲೆ ಅಧಿಕಾರಿಗಳು ಪಿಜಿ ಹಾಗೂ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಲಿದ್ದಾರೆ.







Comments