ಕೋಲ್ಚಾರು: ಶ್ರೀ ಭಗವತಿ ಸೇವಾ ಸಮಿತಿ ಇದರ ವತಿಯಿಂದ 24ನೇ ವರ್ಷದ ಅದ್ದೂರಿ ಓಣಂ ಆಚರಣೆ

ಕೋಲ್ಚಾರು: ಶ್ರೀ ಭಗವತಿ ಸೇವಾ ಸಮಿತಿ, ಕೋಲ್ಚಾರು ಇದರ ವತಿಯಿಂದ ಇಂದು, ಆಗಸ್ಟ್ 23ರಂದು 24ನೇ ವರ್ಷದ ಓಣಂ ಆಚರಣೆಯನ್ನು ಸಂಭ್ರಮ, ಸಡಗರದಿಂದ ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ವಿಶೇಷವಾಗಿ ತಿರುವಾದಿರ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಮಹಿಳೆಯರು ಹಾಗೂ ಮಕ್ಕಳಿಗಾಗಿ ಹಲವು ಬಗೆಯ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಭಾಗವಹಿಸಿದವರು ಉತ್ಸಾಹದಿಂದ ಪಾಲ್ಗೊಂಡರು.

ಆಚರಣೆಯ ಪ್ರಮುಖ ಆಕರ್ಷಣೆಯಾಗಿದ್ದ ಅದ್ಭುತ ಓಣಂ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಾಂಪ್ರದಾಯಿಕ ರೀತಿಯಲ್ಲಿ ಆಯೋಜಿಸಲಾದ ಓಣಂ ಸದ್ಯವನ್ನು ಸಮಿತಿ ಸದಸ್ಯರು, ಕುಟುಂಬಸ್ಥರು ಹಾಗೂ ಆಗಮಿಸಿದ ಅತಿಥಿಗಳು ಸವಿದು ಸಂಭ್ರಮಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟೋಟಗಳು ಹಾಗೂ ಸಾಂಪ್ರದಾಯಿಕ ಓಣಂ ಸದ್ಯದ ಮೂಲಕ ಪರಸ್ಪರ ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಸಾರಿದ ಈ ಆಚರಣೆ, ಕೋಲ್ಚಾರಿನಲ್ಲಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.







Comments