ರಾಜ್ಯದ ಶಾಲೆಗಳಿಗೆ 19 ದಿನಗಳ ಸುದೀರ್ಘ ದಸರಾ ರಜೆ ಘೋಷಣೆ: ಶೈಕ್ಷಣಿಕ ಕ್ಯಾಲೆಂಡರ್ ಪ್ರಕಟ

ಬೆಂಗಳೂರು: ರಾಜ್ಯಾದ್ಯಂತ ಶಾಲಾ ವಿದ್ಯಾರ್ಥಿಗಳಿಗೆ 2026-27ನೇ ಶೈಕ್ಷಣಿಕ ವರ್ಷದಲ್ಲಿ ಬರೋಬ್ಬರಿ 19 ದಿನಗಳ ದಸರಾ ರಜೆ ಸಿಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದ ವಾರ್ಷಿಕ ಶೈಕ್ಷಣಿಕ ಕ್ಯಾಲೆಂಡರ್ ತಿಳಿಸಿದೆ. ಈ ರಜೆಯು ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅನ್ವಯಿಸಲಿದೆ.
ಅಕ್ಟೋಬರ್ 2 ರ ಗಾಂಧಿ ಜಯಂತಿಯ ಸಾರ್ವತ್ರಿಕ ರಜೆಯ ನಂತರ, ಅಕ್ಟೋಬರ್ 3 ರಿಂದ ಅಧಿಕೃತವಾಗಿ ದಸರಾ ರಜೆ ಪ್ರಾರಂಭವಾಗಿ ಅಕ್ಟೋಬರ್ 21 ರ ವಿಜಯದಶಮಿಯವರೆಗೆ ಮುಂದುವರಿಯಲಿದೆ.
ಎರಡನೇ ಶೈಕ್ಷಣಿಕ ಅವಧಿಯು ಅಕ್ಟೋಬರ್ 22, 2026 ರಿಂದ ಪ್ರಾರಂಭವಾಗಿ ಏಪ್ರಿಲ್ 10, 2027 ಕ್ಕೆ ಮುಕ್ತಾಯಗೊಳ್ಳಲಿದ್ದು, ಏಪ್ರಿಲ್ 11 ರಿಂದ ಬೇಸಿಗೆ ರಜೆ ಆರಂಭವಾಗಲಿದೆ. ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ಜಿಲ್ಲಾ ಮಟ್ಟದಲ್ಲಿ ರಜೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವ ಅಧಿಕಾರವನ್ನು ಉಪ ನಿರ್ದೇಶಕರಿಗೆ (DDPI) ನೀಡಲಾಗಿದೆ.







Comments